ಕಾರ್ಕಳ, ಅ.26 (DaijiworldNews/HR): ಈಜು ಬಾರದ ಯುವಕನೊಬ್ಬ ಈಜಾಲು ಮುಂದಾಗಿ ತೋಡಿನ ಸುಳಿಗೆ ಸಿಲುಕಿ ಮೃತಪಟ್ಟ ಘಟನೆ ನಂದಳಿಕೆ ಗ್ರಾಮದ ಆರ್ಯಾಡ್ ಮಾನಬೆಟ್ಟು ಕಲ್ಲಗುಂಡಿ ಎಂಬಲ್ಲಿ ಸಂಭವಿಸಿದೆ.
ಮೂಲತಃ ಬಾಳೆಹೊನ್ನೂರು ನಿವಾಸಿ ಪ್ರವೀಣ್ (19 ) ಸಾವಿಗೀಡಾದ ದುರ್ದೈವಿ.
ಕಾರ್ಯಕ್ರಮದ ನಿಮಿತ್ತಿ ಸಂಬಂಧಿಕರ ಮನೆಗೆ ಬಂದಿದ್ದ ಪ್ರವೀಣ್ ಮಂಗಳವಾರ ಮಧ್ಯಾಹ್ನ ಸಂಬಂಧಿಕರಾದ ಚೇತನ್, ಪ್ರವೀಣ್, ಸುಶೀಲ, ರೇಖಾ ಎಂಬವರು ಮನೆಯ ಸಮೀಪದ ತೋಡಿಗೆ ಮನೆಯವರೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.