ಕಾಸರಗೋಡು, ಅ.26 (DaijiworldNews/HR): ಬೈಕ್ ಕಳವಿಗೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಾಯಿಪ್ಪಾಡಿ ಶಿರಿಬಾಗಿಲಿನ ನೌಮಾನ್ (23) ಬಂಧಿತ ಆರೋಪಿ.
ನೆಲ್ಲಿಕಟ್ಟೆ ಬಿಲಾಲ್ ನಗರದ ಮುನೀರ್ ರವರ ಮನೆಯಂಗಳದಲ್ಲಿರಿಸಲಾಗಿದ್ದ ಬೈಕನ್ನು ಕಳವು ಗೈದ ಆರೋಪಿಯಾಗಿದ್ದಾನೆ. ಅಕ್ಟೋಬರ್ 24 ರಂದು ಕಳವು ನಡೆದಿತ್ತು. ಈ ಬಗ್ಗೆ ಮುನೀರ್ ಬದಿಯಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಇನ್ನು ಸೋಮವಾರ ರಾತ್ರಿ ಬದಿಯಡ್ಕ ಸಮೀಪದ ಕಡಂಬಳದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ನೌಮಾನ್ನನ್ನು ಪ್ರಶ್ನಿಸಿದಾಗ ತದ್ವಿರುದ್ದ ಉತ್ತರ ನೀಡಿದ್ದು, ಹೆಚ್ಚಿನ ವಿಚಾರಣೆ ನಡೆಸಿದಾಗ ಬೈಕ್ ಕಳವು ನಡೆಸಿರುವುದನ್ನು ತಪ್ಪೊಪ್ಪಿಕೊಂಡಿದ್ದಾನೆ. ಈತ ಈ ಹಿಂದೆ ಮೂರು ಬೈಕ್ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.