ಮಣಿಪಾಲ, ಅ.26 (DaijiworldNews/HR): ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಸಹಯೋಗದೊಂದಿಗೆ 5ನೇ ಆವೃತ್ತಿಯ ಮಣಿಪಾಲ್ ಮ್ಯಾರಥಾನ್ ಎಮ್ಎಮ್ 2022 ಅನ್ನು, 13 ಫೆಬ್ರವರಿ 2022 ರಂದು ನಡೆಯಲಿದೆ ಎಂದು ಮಾಹೆಯ ಸಹ ಕುಲಪತಿ ಡಾ. ಎಚ್ ಎಸ್ ಬಲ್ಲಾಳ್ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿದ ಮಾಹೆ ಸಹಕುಲಪತಿ ಡಾಕ್ಟರ್ ಎಚ್.ಎಸ್. ಬಲ್ಲಾಳ್, "ಮ್ಯಾರಥಾನ್ ಸಮಯದಲ್ಲಿ ಸರ್ಕಾರದ ಹಾಗೂ ಬೇರೆ ನಿಯಂತ್ರಕರು ತಿಳಿಸಿರುವಂತೆ ಎಲ್ಲಾ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ನಾವು ಮ್ಯಾರಥಾನ್ ಅನ್ನು ನಡೆಸುತ್ತಾ ಬಂದಿದ್ದೇವೆ. ಈ ಹಿಂದಿನ ವರ್ಷ ಕೊವಿಡ್ ಕಾರಣದಿಂದ ಕಾರ್ಯಕ್ರಮವನ್ನು ನಡೆಸಿರಲಿಲ್ಲ. 2022 ರ ಫೆಬ್ರವರಿ 13 ರಂದು ಮ್ಯಾರಥಾನ್ ಅನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ನಡೆಸುವ ಫುಲ್ ಮ್ಯಾರಥಾನ್ ನಲ್ಲಿ ದೇಶ ವಿದೇಶದ ಕ್ರೀಡಾಪಟುಗಳು ಬಾಗವಹಿಸಲಿದ್ದಾರೆ" ಎಂದರು.
ಉಡುಪಿ ಶಾಸಕರಾದ ರಘುಪತಿ ಭಟ್ ಮಾತನಾಡಿ, "ಕಳೆದ 3 ವರ್ಷಗಳಿಂದ 42 ಕಿಲೋ ಮೀಟರ್ ಫುಲ್ ಮ್ಯಾರಥಾನ್ ನಡೆಸಲಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಮ್ಯಾರಥಾನ್ ನಂತೆಯೇ ಈ ಮ್ಯಾರಥಾನ್ಅನ್ನು ಆಯೋಜನೆ ಮಾಡಲಾಗುತ್ತದೆ. 2020 ರಲ್ಲಿ ನಡೆದ ಮ್ಯಾರಥಾನ್ ನಲ್ಲಿ ಸುಮಾರು 10 ಸಾವಿರ ಜನ ಭಾಗವಹಿಸಿದ್ದರು. ಈ ಬಾರಿ ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್ ಸೇರಿದಂತೆ 3 ಕಿಲೋಮೀಟರ್, 5 ಕಿಲೋ ಮೀಟರ್ ಮತ್ತು 10 ಕಿಲೋ ಮೀಟರ್ ಓಟಗಳನ್ನು ಕೂಡಾ ಆಯೋಜಿಸಲಾಗಿದೆ. ಪ್ರಧಾನಿ ಬೋದಿಯವರು ನೀಡಿದ 'ಪಿನ್ ಇಂಡಿಯಾ' ಕರೆಗೆ ಬೆಂಬಲಿಸುವ ಸಲುವಾಗಿ ಈ ಮ್ಯಾರಥಾನ್ ಆಯೋಜಿಸಲಾಗಿದೆ, ಕೆಲವೇ ದಿನಗಲಲ್ಲಿ ಆನ್ ಲೈನ್ ನೋಂದಾವಣೆಯನ್ನು ಕೂಡಾ ಆರಂಬಿಸಲಾಗುವುದು" ಎಂದಿದ್ದಾರೆ
ಡಾ. ನಾರಾಯಣ ಸಭಾಹಿತ್, ರಿಜಿಸ್ಟ್ರಾರ್ ಮಾಹೆ ಮಾತನಾಡಿ "ಓಟವು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಹೊಸ ಜನರನ್ನು ಭೇಟಿ ಮಾಡಲು ಮತ್ತು ಬಲವಾದ ಸಂಬಂಧಗಳನ್ನು ರೂಪಿಸಲು ನಿಮಗೆ ಸಹಾಯ ಮಾಡುವ ದೈಹಿಕ ವ್ಯಾಯಾಮವಾಗಿದೆ. ಗುರಿಗಳನ್ನು ರೂಪಿಸಲು ಮತ್ತು ಸಾಧಿಸಲು ಓಟವು ಉತ್ತಮ ವಿಧಾನವಾಗಿದೆ. ನಿಮ್ಮ ಜೀವನದ ಗುರಿಯನ್ನು ರೂಪಿಸಬೇಕೆಂದರೆ, ನಿಮ್ಮ ಬೂಟುಗಳನ್ನು ಹಾಕಿಕೊಂಡು ಕೆಲಸಕ್ಕೆ ಹೋಗುವ ಸಮಯ ಬಂದಿದೆ ಎಂದರು. ಫೆಬ್ರವರಿ 2022 ಕ್ಕೆ ನಿಗದಿಯಾಗಿರುವ ಮಣಿಪಾಲ ಮ್ಯಾರಥಾನ್ ನ 5 ನೇ ಆವೃತ್ತಿಯನ್ನು ಘೋಷಿಸಲು ನಮಗೆ ಸಂತೋಷವಾಗಿದೆ. ನಾವು ಮಾಹೆಯಲ್ಲಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ, ಕೋವಿಡ್ ನ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಯತ್ನಿಸುತ್ತೇವೆ" ಎಂದರು.
ಎಸ್ ಪಿ ಕರ್, ನಿರ್ದೇಶಕರು, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗ, ಮಾಹೆ ಹಾಗೂ ಮಾಹೆ ಕ್ರೀಡಾ ಪರಿಷತ್ತಿನ ಕಾರ್ಯದರ್ಶಿ ಡಾ ವಿನೋದ್ ನಾಯಕ್ ಮಾತನಾಡಿ, ಮಾಹೆಯಲ್ಲಿ ನಾವು ಸರ್ವತೋಮುಖ ಬೆಳವಣಿಗೆಯ ಬಗ್ಗೆ ಗಮನ ನೀಡುತ್ತೇವೆ. ನಮ್ಮ ಪ್ರಮುಖ ಕಾರ್ಯಕ್ರಮವಾದ ಮ್ಯಾರಥಾನ್ ಈ ನಮ್ಮ ನಂಬಿಕೆಗೆ ಉದಾಹರಣೆಯಾಗಿದೆ. ಮಾಹೆ ಅವರು 5ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ 2022ಅನ್ನು ನಿಗದಿಯಾಗಿರುವಂತೆ 13ನೇ ಫೆಬ್ರವರಿ2022 ರಂದು ಕೋವಿಡ್ ನಿಯಮಾವಳಿಗಳು ಹಾಗು ಮಾರ್ಗಸೂಚಿಗಳನ್ನು ಇಟ್ಟುಕೊಂಡು ಹೇಗೆ ನಡೆಸಬಹುದು ಎಂದು ಕಾರ್ಯತಂತ್ರ ರೂಪಿಸುತ್ತಿದೆ" ಎಂದು ತಿಳಿಸಿದರು.
ಈ ಮ್ಯಾರಥಾನ್ ಭಾರತ ಹಾಗೂ ವಿದೇಶದ ಕ್ರೀಡಾಪಟುಗಳನ್ನು ಆಕರ್ಷಿಸುತ್ತಿದ್ದು, ಈ ಹಿಂದಿನ ವರ್ಷಗಳಲ್ಲಿ ಕೂಡಾ ದೇಶ ವಿದೇಶದ ಹಲವಾರು ಮಂದಿ ಅತ್ಲೀಟ್ ಗಳು ಭಾಗವಹಿಸಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಮಾಹೆ ಸಾಮಾನ್ಯ ಸೇವೆಗಳು ನಿರ್ದೇಶಕರು ಕರ್ನಲ್ ಪ್ರಕಾಶ್ ಚಂದ್ರ, ಕ್ರೀಡಾ ಪರಿಷತ್ತಿನ ಜಂಟಿ ಕಾರ್ಯದರ್ಶಿ ಡಾ ಶೋಭಾ ಈರಪ್ಪ ಉಡುಪಿ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೆಶನ್ ಅಧ್ಯಕ್ಷ್ಯರಾದ ಬಾಲಕೃಷ್ಣ ಹೆಗ್ಡೆ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.