ಮಂಗಳೂರು, ಅ. 24 (DaijiworldNews/SM): ಇತ್ತೀಚಿಗೆ ಜರುಗಿದ ರಾಷ್ಟ್ರೀಯ ಮಟ್ಟದ ಪ್ರಚೀನ ಯುದ್ಧ ವಿದ್ಯಾ ಸಿಲಂಬಂ ಸ್ಪರ್ದೆಯಲ್ಲಿ ವೆನಿಲ್ಲಾ ಮಣಿಕಂಠ ಅವರು ಭಾಗವಹಿಸಿ ಡಬಲ್ ಸ್ಟಿಕ್ ಹಾಗು ವಾಲ್ ವೀಚು ವಿಭಾಗದಲ್ಲಿ 2 ಚಿನ್ನದ ಪದಕವನ್ನು ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆಆಯ್ಕೆ ಆಗಿದ್ದಾರೆ.
ಈಕೆ ಪ್ರಸಕ್ತ ಎನ್ಐಟಿಕೆ ಯಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿದ್ದು ರಾಜೇಶ್ ಬ್ರಹ್ಮರಕೂಟ್ಲು ಇವರ ಶಿಷ್ಯೆಯಾಗಿದ್ದಾರೆ. ಮುಡಿಪು ಹೂಹಾಕುವಕಲ್ಲು ಗ್ರಾಮದಲ್ಲಿ ಸುಮತಿ ಹಾಗೂ ನೀಲಕಂಠ ದಂಪತಿಗಳ ಮಗಳಾಗಿದ್ದು, ಈಕೆ ಕರಾಟೆ, ಜೂಡೋ ಸಿಲಂಬಂ ಮೊದಲಾದ ಮಾರ್ಷಲ್ ಆರ್ಟ್ಸ್ ಅನ್ನು ತರಬೇತಿ ನೀಡುತ್ತಿದ್ದಾಳೆ.
ವೆನಿಲ್ಲಾ ಮಣಿಕಂಠ ಅವರು ಶ್ರೀ ರಾಮಕೃಷ್ಣ ಆಶ್ರಮ ತಪೋವನ ಪೊಳಲಿ ಇಲ್ಲಿ ತರಬೇತಿ ಯನ್ನು ಪಡೆದಿದ್ದಾರೆ.