ಮಂಗಳೂರು,ನ 15(MSP): ರಾಜಕೀಯ ಚಾಣಕ್ಯ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬುಧವಾರ ರಾತ್ರಿ ಮಂಗಳೂರಿನಲ್ಲಿ ತಂಗಿದ್ದು ಗುರುವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಾಸ್ ಆಗಿದ್ದಾರೆ.
ಮಂಗಳೂರಿನ ಆರ್ ಎಸ್ ಎಸ್ ನ ಶಕ್ತಿ ಕೇಂದ್ರವಾದ ಸಂಘನಿಕೇತನದಲ್ಲಿ ಬುಧವಾರ ತಡರಾತ್ರಿವರೆಗೆ ನಡೆದ ಮಹತ್ವದ ಸಭೆಯಲ್ಲಿ ಆನೇಕ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ರಾತ್ರಿ 8.30ಕ್ಕೆ ಆಗಮಿಸಿದ ಮಂಗಳೂರಿಗೆ ಆಗಮಿಸಿದ ಅವರು ನೇರವಾಗಿ ಮಂಗಳೂರಿನ ಮಣ್ಣಗುಡ್ಡ ದಲ್ಲಿರುವ ಸಂಘನಿಕೇತನಕ್ಕೆ ತೆರಳಿದ್ದರು ಬಳಿಕ ತಡರಾತ್ರಿ 2 ಗಂಟೆಯವರೆಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ.
ಸಂಘನಿಕೇತನದಲ್ಲಿ ನ.11 ದಿಂದ ನಡೆಯುತ್ತಿರುವ ದಕ್ಷಿಣ ಮತ್ತು ಪಶ್ಚಿಮ ಭಾರತದ ರಾಜ್ಯಗಳ ಆರೆಸ್ಸೆಸ್ ಪ್ರಚಾರಕ ಅಭ್ಯಾಸವರ್ಗದಲ್ಲಿ ಆರೆಸ್ಸೆಸ್ ಉನ್ನತ ನಾಯಕರು ಪಾಲ್ಗೊಂಡಿದ್ದಾರೆ. ಅಮಿತ್ ಷಾ ಮಂಗಳೂರಿನ ಬೈಠಕ್ ನಲ್ಲಿ ಆರೆಸ್ಸೆಸ್ ಸರ ಕಾರ್ಯವಾಹ ಸುರೇಶ್ ಜೋಶಿ. ಸರ ಕಾರ್ಯ ವಾಹ ಮುಕುಂದ್ ಮುಂತಾದವರೊಂದಿಗೆ ಖಾಸಗಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಹಾಗು ಶಬರಿಮಲೆ ಹೋರಾಟ , ಸೇರಿದಂತೆ ಮುಂಬರುವ ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಆರ್ ಎಸ್ ಎಸ್ ಮುಖಂಡರು ಅಮಿತ್ ಶಾ ಅವರಿಗೆ ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.
ಇದಲ್ಲದೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ .ಅಮಿತ್ ಷಾ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಇವರ 2ನೇ ಅವಧಿಯಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳಲ್ಲಿ ತನ್ನ ಲೋಕಸಭಾ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನದ ಸಂಪೂರ್ಣ ಮಾಹಿತಿಯನ್ನೊಳಗೊಂಡ 4ನೇ ವರ್ಷದ ಸಾಧನೆಗಳ ಮೋದಿ ಹಾದಿಯಲ್ಲಿ 4 ವರ್ಷ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.