ಸುರತ್ಕಲ್, ಅ.23 (DaijiworldNews/HR): ಅಕ್ರಮವಾಗಿ ಹೇಡಿಗಳಂತೆ ರಾತ್ರಿ ವೇಳೆ ಹಿಂದೂ ಧಾರ್ಮಿಕ ಸ್ಥಳಗಳನ್ನು ಪ್ರವೇಶಿಸಿ ಭಗ್ನಗೊಳಿಸುವವರಿಗೆ ಕ್ಷಮೆ ನೀಡಲಾಗದು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.
ಕೂಳೂರಿನಲ್ಲಿ ನಾಗ ಮೂಲಸ್ಥಾನ ವಿಗ್ರಹಕ್ಕೆ ಹಾನಿಗೊಳಿಸಿದ ಘಟನೆಯ ಬಗ್ಗೆ ಮಾತನಾಡಿದ ಅವರು, "ನಮ್ಮನ್ನು ಧಾರ್ಮಿಕ ಭಾವನೆಗಳ ಮೂಲಕ ಕೆಣಕಿದರೆ ನಾವು ಕಾನೂನು ಮೂಲಕ ಮರೆಯಲಾದ ಪಾಠ ಕಲಿಸುತ್ತೇವೆ" ಎಂದುಎಚ್ಚರಿಕೆ ನೀಡಿದ್ದಾರೆ.
ಇನ್ನು ಪೊಲೀಸ್ ಗುಪ್ತಚರ ವ್ಯವಸ್ಥೆ ಬಲಪಡಿಸಿ, ಹಿಂದೂ ಪೂಜಾ ಸ್ಥಳಗಳನ್ನು ಭಗ್ನಗೊಳಿಸುವ ಮೂಲಕ ಕ್ಷೇತ್ರದಲ್ಲಿ ಕೋಮು ಭಾವನೆ ಕೆರಳಿಸುವವರ ವಿರುದ್ದ ವಿಶೇಷ ಕಾರ್ಯಚರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.
ಬೈಕಂಪಾಡಿಯಲ್ಲಿ ಕರ್ಕೇರ ನಾಗ ಮೂಲಸ್ಥಾನ ವಿಗ್ರಹ ಭಗ್ನ ಘಟನೆ ಬಳಿಕ ಕೆಲವೇ ದಿನಗಳಲ್ಲಿ ಇದೀಗ ಕೂಳೂರಿನಲ್ಲಿಯೂ ನಡೆದಿದೆ.