ಉಡುಪಿ,ಅ 23 (DaijiworldNews/MS): ಮುಂಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಲ್ಲಿನ ಕೊಳಲಗಿರಿ ಮೂಲದ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ರೂಡಿ ರೋಷನ್ ಡಿಸೋಜಾ (33) ಮೃತಪಟ್ಟವರು.
ರೂಡಿ ರೋಷನ್ ಅವರು ಮುಂಬೈನ ಶಿಪ್ಯಾರ್ಡ್ನಲ್ಲಿ ಕಳೆದ 7 ವರ್ಷಗಳಿಂದ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಕ್ಟೋಬರ್ 22 ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ವೇಳೆ ಬೈಕ್ ಗೆ ಟ್ರಕ್ ಹಿಂದಿನಿಂದ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಸಾವನ್ನಪ್ಪಿದರು.
ಮೃತರು ತಂದೆ - ತಾಯಿ ಆಲ್ಫ್ರೆಡ್ ಡಿಸೋಜಾ ಮತ್ತು ಮೇರಿ ಡಿಸೋಜಾ, ಪತ್ನಿ ಸುರುಚಿ ಡಿಸೋಜಾ ಮತ್ತು ಪುತ್ರ ಇವಾನ್ ಡಿಸೋಜಾ ಅವರನ್ನು ಅಗಲಿದ್ದಾರೆ.
ರೂಡಿಯ ಪಾರ್ಥಿವ ಶರೀರವನ್ನು ಇಂದು ಊರಿಗೆ ತರಲಾಗುತ್ತಿದ್ದು ಸಂಜೆ ಕೋಲಲಗಿರಿ ಚರ್ಚ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.