ಬಂಟ್ವಾಳ, ನ 14 (MSP): ಬಿ.ಸಿ ರೋಡಿನಲ್ಲಿ ಇಂದಿರಾ ಕ್ಯಾಂಟೀನ್ ಕಂಪೌಂಡ್ ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಮುಂದಾದಾಗ ಪುರಸಭಾ ಸದಸ್ಯ ಗೋವಿಂದಪ್ರಭು ಅವರು ತೀವ್ರವಾಗಿ ವಿರೋಧ ವ್ಯಕ್ತಡಿಸಿದ ಘಟನೆ ನ.14 ರ ಬುಧವಾರ ನಡೆದಿದೆ.
ಇಂದಿರಾ ಕ್ಯಾಂಟೀನ್ ಕಂಪೌಂಡ್ ಕಟ್ಟಲು ಹೆದ್ದಾರಿಗೆ ಮೀಸಲಿರಿಸಿದ ಜಾಗವನ್ನು ಅತಿಕ್ರಮಿಸಲಾಗಿದೆ ಎಂಬ ಆರೋಪಿಸಿ ಗೋವಿಂದ ಪ್ರಭು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನ.೧೩ರಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲಿಸಿದ್ದರು. ಆದರೆ ಇಂದು ಬೆಳಿಗ್ಗೆ ಕಾಮಗಾರಿ ಸ್ಥಳಕ್ಕೆ ಪೊಲೀಸರೊಂದಿಗೆ ಆಗಮಿಸಿದ ಗುತ್ತಿಗೆದಾರರು ಕಂಪೌಂಡ್ ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ. ಈ ವೇಳೆ ಗೋವಿಂದ ಪ್ರಭು ಅಡ್ಡಿಪಡಿಸಲು ಪ್ರಯತ್ನಿದ್ದು ಅವರನ್ನು ಪೊಲಿಸರನ್ನು ಹೊರಕ್ಕೆ ಕಳುಹಿಸಿದ್ದಾರೆ. ಈ ವಿಚಾರವಾಗಿ ಗುತ್ತಿಗೆದಾರರು ಹಾಗೂ ಪುರಸಭಾ ಸದಸ್ಯ ಗೋವಿಂದಪ್ರಭು ಅವರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಘಟನೆಯಿಂದಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದರು.
ಬಳಿಕ ಸ್ಥಳಕ್ಕೆ ಶಾಸಕ ರಾಜೇಶ್ ನಾಯಕ್ ಭೇಟಿ ನೀಡಿದ್ರು. ಈ ವೇಳೆ ಪೊಲೀಸರು ಅವರು ಒಳಕ್ಕೆ ಬರದಂತೆ ತಡೆದರು. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಕಾಮಗಾರಿಗೆ ಅವಕಾಶ ನೀಡೊದಿಲ್ಲ ಎಂದು ಸ್ಪಷ್ಟಪಡಿಸಿದರು.