ಉಡುಪಿ, ಅ. 21 (DaijiworldNews/SM): ಕೈಯಲ್ಲಿ ಗನ್ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಮೇಶ್ ನಾಯಕ್(46) ಎಂಬಾತ ಎಸ್ಬಿಬಿಎಲ್ ಮೇಕ್ನ ಅನಧಿಕೃತ ಗನ್ ಅನ್ನು ಹಿಡಿದಿದ್ದು, ತಿರುಗಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸರು ಬಂದಿಸಿದ್ದಾರೆ.
ಮಣಿಪಾಲ ಸ್ಟಾಟನ್ನ ಪೊಲೀಸ್ ಸಿಬ್ಬಂದಿಗೆ ಮೂಡಿಕೊಡಿಯಲ್ಲಿ ಒಬ್ಬ ವ್ಯಕ್ತಿಯು ಗನ್ ಹಿಡಿದುಕೊಂಡು ಓಡಾಡುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಮಣಿಪಾಲ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಧಾಕರ್ ತೋನ್ಸೆ ಅವರು ದಾಳಿ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಎರಡು ಸುತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ನಾಯಕ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.