ಕಾರ್ಕಳ, ಅ. 20 (DaijiworldNews/SM): ದೇಶದೆಲ್ಲೆಡೆ ತೈಲ ಬೆಲೆ ತೀವ್ರವಾಗಿ ಏರಿಕೆ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಮಾಜಿ ಸಿಎಂ ವೀರಪ್ಪ ಮೋಯ್ಲಿ ಪ್ರತಿಕ್ರಿಯೆ ನೀಡಿದ್ದು, ನಾನು ಅಧಿಕಾರದಲ್ಲಿದ್ದಿದ್ದರೆ 45 ರೂಪಾಯಿಗೆ ಪೆಟ್ರೋಲ್ ನೀಡುತ್ತಿದ್ದೆ ಎಂದಿದ್ದಾರೆ.
ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿಗೂ 45 ರೂ.ಗೆ ಪೆಟ್ರೋಲ್ ನೀಡಲು ಸಾಧ್ಯವಿದೆ. ತೈಲ ಬೆಲೆ ಪ್ರಸ್ತುತ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ನಮ್ಮ ಕಾಲದಲ್ಲಿ ಅತ್ಯಂತ ಗರಿಷ್ಠ ಮಟ್ಟದಲ್ಲಿತ್ತು.
ನಮ್ಮ ಕಾಲದಲ್ಲಿ ಸಿಲಿಂಡರ್ ಗೆ 400 ರೂಪಾಯಿ ಸಬ್ಸಿಡಿ ನೀಡುತ್ತಿದ್ದೆವು. ಆದರೆ, ಇದೀಗ ಜನರಿಗೆ ಟ್ಯಾಕ್ಸ್ ಹೊರೆ ಗರಿಷ್ಟವಾಗಿದೆ. ನಮ್ಮ ಕಾಲದಲ್ಲಿ ಗರಿಷ್ಟ 300ರಿಂದ 350 ರೂಪಾಯಿಗೆ ಸಿಲಿಂಡರ್ ನೀಡುತ್ತಿದ್ದೆವು, ಎಂದ ಅವರು, ಇಂಧನವನ್ನು ಜಿಎಸ್ ಟಿ ವ್ಯಾಪ್ತಿಗೆ ತರುವ ಒತ್ತಾಯ ಆರಂಭದಿಂದಲೂ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.