ಮಂಗಳೂರು ನ 14 (MSP): ರಾಜ್ಯದಲ್ಲಿ ಆಡಳಿತ ನಡೆಸುವ ಸಮ್ಮಿಶ್ರ ಸರಕಾರ ಇಬ್ಬಗೆ ನೀತಿ ಅನುಸರಿಸುತ್ತಿದ್ದು, ಹಿಂದೂ ದೇವರು, ಧಾರ್ಮಿಕ ಮುಖಂಡರ ವಿರುದ್ಧ ಅವಹೇಳನ ಮಾಡಿ ಬೈಯುವವರಿಗೆ ಒಂದು ನೀತಿ, ಟಿಪ್ಪುವಿನ ವಾಸ್ತವಾಂಶ ತೋರಿಸಿದವರಿಗೆ ಇನ್ನೊಂದು ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಶಾಸಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ನ.14 ರಂದು ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಪತ್ರಕರ್ತ ಸಂತೋಷ್ ತಮ್ಮಯ್ಯ ಅವರ ಬಂಧನವನ್ನು ತೀವ್ರವಾಗಿ ಖಂಡಿಸಿದರು. ಟಿಪ್ಪು ಕುರಿತ ಹೇಳಿಕೆ ನೀಡಿದ ಪತ್ರಕರ್ತ ಸಂತೋಷ್ ಅವರನ್ನು ಬಂಧಿಸಿದ ಸರ್ಕಾರ ಈ ಹಿಂದೆ ಹಿಂದೂ ಧರ್ಮದನ್ನು , ಹಿಂದೂ ದೇವರನ್ನು ಅವಹೇಳನೆ ಮಾಡಿದ ಪ್ರೋ. ಭಗವಾನ್, ಮಹೇಶ್ಚಂದ್ರ, ಯೋಗೇಶ್ ಮಾಸ್ಟರ್, ಗಿರೀಶ್ ಕಾರ್ನಾಡ್ರನ್ನು ಯಾಕೆ ಬಂಧಿಸಿಲ್ಲ. ಈ ವಿಚಾರದಲ್ಲೇ ಸರ್ಕಾರದ ದ್ವಂಧ ನೀತಿಯನ್ನು ಅನುಸರಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಯಾವ ರೀತಿಯಲ್ಲಿ ಸೀಮಿತವಾಗಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ, ಸಂತೋಷ ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರವಿದ್ದಾಗ ಎಸಿಬಿ ಬಳಸಿ ಭ್ರಷ್ಟರನ್ನು ಉಳಿವಿಗೆ ಪ್ರಯತ್ನಿಸುತ್ತಿದ್ದರು. ಈಗ ಸಮ್ಮಿಶ್ರ ಸರಕಾರ ಸಿಸಿಬಿ- ಸಿಒಡಿಗಳನ್ನು ಕೂಡಾ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರು. ಅಂದು ಕಾಂಗ್ರೆಸ್ ನ ಟಿ.ಬಿ ಜಯಚಂದ್ರ ಸಹಿತ ಕಾಂಗ್ರೆಸ್ ನ ಹಲವು ಮುಖಂಡರು ನೋಟ್ ಬ್ಯಾನನ್ನು ಸ್ವಾಗತಿಸಿದ್ರು ಆದರೆ ಇಂದು ಅದೇ ಕಾಂಗ್ರೆಸೀಗರು ಮೋದಿಯನ್ನು ಸುಡುವ ಹೇಳಿಕೆ ನೀಡಿದ್ದಾರೆ. ಭ್ರಷ್ಟರನ್ನು ರಕ್ಷಿಸಲು ನೋಟ್ ಬ್ಯಾನ್ ಎಂದು ಆರೋಪಿಸಿದವರಿಗೆ ಬ್ಯಾನ್ ನಂತರ ತೆರಿಗೆ ಪಾವತಿ ಮಾಡುವವರ ಸಂಖ್ಯೆ ದುಪ್ಪಟ್ಟಾಗಿದೆ ಎನ್ನುವುದು ತಿಳಿಯದೇ ಎಂದು ಪ್ರಶ್ನಿಸಿದರು ನೋಟ್ ಬ್ಯಾನ್ ನಂತರ ಭಾರತದ ಆರ್ಥಿಕತೆ ಸುಸ್ಥಿತಿಗೆ ತಲುಪಿದೆ ಎಂದರು.
ಎನ್ ಡಿ ಎ ಸರ್ಕಾರ ಅರ್ಹರಿಗೆ ಮಾತ್ರ ಸಾಲ ನೀಡಿತ್ತು. ಆದರೆ ಯುಪಿಎ ಆಡಳಿತಾವಧಿಯಲ್ಲಿ ವಿಜಯ್ ಮಲ್ಯ, ನೀರವ್ ಮೋದಿಯಂತವರಿಗೆ ಸಾಲ ನೀಡಿದೆ. ಕೇಂದ್ರ ಸರ್ಕಾರ ಬಡವರಿಗೆ ಜನ್ ಧನ್ , ಉಚಿತ ಎಲ್.ಪಿ.ಜಿ,ಯಂತಹ ಹಲವು ಕೊಡುಗೆಗನ್ನು ನೀಡಿದೆ ಎಂದರು.
ಜನಾರ್ಧನ ರೆಡ್ದಿಯ ನಾವು ಸಮರ್ಥಿಸುತ್ತಿಲ್ಲ, ಆದರೆ ರೆಡ್ಡಿಯವರನ್ನು ಯಾವ ಆಧಾರದಲ್ಲಿ ಬಂಧಿಸಲಾಗಿದೆ ಎನ್ನುವುದನ್ನು ಕೋರ್ಟ್ ಕೂಡಾ ಪ್ರಶ್ನಿಸಿತ್ತು. ಇನ್ನು ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ, ಬಿಜೆಪಿ ಮೇಲೆ ಗೂಬೆ ಕೂರಿಸಲಾಯಿತು. ತನ್ನನ್ನು ಯಾರೂ ಕೂಡಾ ಪ್ರಶ್ನಿಸಿಬಾರದು ಎನ್ನುವ ಮನಸ್ಥಿತಿ ಕಾಂಗ್ರೆಸ್ನದ್ದು ಎಂದು ಶಾಸಕ ಸಿಟಿ ರವಿ ಹೇಳಿದರು.