ಲಂಡನ್,ನ 14 (MSP): ಭಾರತೀಯ ಮೂಲದ 9 ತಿಂಗಳ ಗರ್ಭಿಣಿಯನ್ನು ಬಾಣ ಬಿಟ್ಟು ಹತ್ಯೆ ಮಾಡಲಾಗಿದ್ದು, ಆಕೆಯ ಹೊಟ್ಟೆಯಲ್ಲಿದ್ದ ಮಗು ಅಚ್ಚರಿ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಲಂಡನ್ ನಲ್ಲಿ ನಡೆದಿದೆ. ಈ ಘಟನೆಯೂ ಪೂರ್ವ ಲಂಡನ್ ನ ಇಲ್ಫೋರ್ಡ್ ನಲ್ಲಿ ನಡೆದಿದ್ದು, ಮಹಿಳೆ ವಾಸಿಸುತ್ತಿದ್ದ ಮನೆಯಲ್ಲಿಯೇ ಹೊಂಚು ಹಾಕಿ ಕುಳಿತಿದ್ದ ಆಕೆಯ ಮಾಜಿ ಪತಿ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಆಕೆಯ ಮೇಲೆ ಬಿಲ್ಲು ಬಾಣದಿಂಡ ನಿಂದ ದಾಳಿ ಮಾಡಿದ್ದಾನೆ.
ಮಾಜಿ ಪತಿ ಬಿಟ್ಟ ಬಾಣ ನೇರವಾಗಿ ಆಕೆಯ ಹೊಟ್ಟೆಯನ್ನು ಸೀಳಿದೆ. ತೀವ್ರ ರಕ್ತಸ್ರಾವಕೊಂಡು ಒದ್ದಾಡುತ್ತಿದ್ದ ಮಹಿಳೆಯನ್ನು ಕಂಡ ಆಕೆಯ 2ನೇ ಪತಿ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಆಕೆ ಚಿಕಿತ್ಸೆಫಲಕಾರಿಯಾಗದೆ ಅಸುನೀಗಿದ್ದಾರೆ.
ಆದರೆ ಅಚ್ಚರಿ ವಿಚಾರವೆಂದರೆ ವೈದ್ಯರು ತಡಮಾಡದೆ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಸಿಸೇರಿಯನ್ ಮೂಲಕ ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ, ಅಲ್ಲದೆ ಮಗು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. ಕ್ರೂರಿ ಬಿಟ್ಟ ಬಾಣ ಆಕೆಯ ಹೊಟ್ಟೆಯನ್ನು ಸೀಳಿದರೂ ಗರ್ಭಕ್ಕೆ ಯಾವುದೇ ರೀತಿಯ ಹಾನಿ ಆಗಿರಲ್ಲಿಲ್ಲ ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟ ಮಹಿಳೆಯನ್ನು 35 ವರ್ಷದ ದೇವಿ ಉನ್ಮಾಥಲೇಗಡೂ ಎಂದು ಗುರುತಿಸಲಾಗಿದ್ದು, ಇವರು ರಾಮನ್ಡೊಗೆ ಉನ್ಮಾಥಲೇಗಡೂ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದು, ಬಳಿಕ ಈಕೆ ಆತನಿಗೆ ವಿಚ್ಛೇದನ ನೀಡಿದ್ದರು. ಕೆಲವು ಹಿಂದೆಯಷ್ಟೇ ಈಕೆ ಇಮ್ತಿಯಾಜ್ ಮೊಹಮದ್ ಎಂಬಾತನನ್ನು ವಿವಾಹವಾಗಿ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಸನಾ ಮೊಹಮದ್ ಎಂದು ಬದಲಾಯಿಸಿದ್ದರು. ಸದ್ಯ ಕೊಲೆ ಮಾಡಿದ ಆರೋಪಿ ಮಾಜಿ ಪತಿಯನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ.