ಮಂಗಳೂರು, ಅ.19 (DaijiworldNews/HR): ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್ -ಮಿಲಾದ್ನ್ನು ದೇಶಾದ್ಯಂತ ಮುಸ್ಲಿಮರು ಸಂಭ್ರಮದಿಂದ ಮಂಗಳವಾರ ಆಚರಿಸುತ್ತಿದ್ದು, ಇನ್ನು ಕೆಲವು ಸ್ಥಳಗಳಲ್ಲಿ ಈದ್ ಅನ್ನು ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮುಸ್ಲಿಮರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ, ಬೋಧನೆಗಳನ್ನು ಆಚರಿಸುತ್ತಾರೆ. ಪ್ರವಾದಿ ತನ್ನ ಶತ್ರುಗಳನ್ನು ಸಹ ಕ್ಷಮಿಸಿದ್ದಾನೆ ಎಂದು ನಂಬಲಾಗಿದೆ.
ಈದ್ ಹಬ್ಬದಂದು ಹೊಸ ಬಟ್ಟೆಗಳನ್ನು ಧರಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್ನ ಮೂರನೇ ತಿಂಗಳಾದ ರಬಿ-ಉಲ್-ಅವ್ವಲ್ ತಿಂಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಇದು ಚಂದ್ರನ ವೀಕ್ಷಣೆಗೆ ಸಂಬಂಧಿಸಿದೆ. ಈ ದಿನಾಂಕವು ಪ್ರವಾದಿ ಸಾವಿನ ವಾರ್ಷಿಕೋತ್ಸವವನ್ನು ಸಹ ಸೂಚಿಸುತ್ತದೆ.
ಈ ಬಾರಿ ಕೊರೊನಾದಿಂದಾಗಿ ಸರ್ಕಾರದ ಆದೇಶದಂತೆ ಆಚರಣೆಗಳನ್ನು ಆಚರಿಸಲಾಗುತ್ತಿದ್ದು, ಸರ್ಕಾರವು ಮೆರವಣಿಗೆಗಳನ್ನು ನಿರ್ಬಂಧಿಸಿದ್ದು, ಗರಿಷ್ಠ 100 ಭಾಗವಹಿಸುವವರಿಗೆ ಪ್ರಾರ್ಥನಾ ಸಭೆಗಳನ್ನು ಸೀಮಿತಗೊಳಿಸಿದೆ.
ಮಂಗಳವಾರ ಬೆಳಗ್ಗೆ ಮುಸ್ಲಿಂ ಬಾಂಧವರು ಈದ್ ಮಿಲಾದ್ ಸ್ಮರಣಾರ್ಥ ನಗರದ ನಡುಪಲ್ಲಿಯಿಂದ ಬೊಕ್ಕಪಟ್ಟಣ ದರ್ಗಾಕ್ಕೆ ಮೆರವಣಿಗೆ ನಡೆಸಿದರು.