ಮಂಗಳೂರು, ನ 13(SM): ನಗರ ಸಂಚಾರ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಾಹನಗಳ ಗ್ಲಾಸ್ ಗಳಿಗೆ ಸನ್ ಫಿಲ್ಮ್ ಅಳವಡಿಸಿದ ಕಾರು ಚಾಲಕರಿಗೆ ದಂಡ ವಿಧಿಸಿದ್ದಾರೆ. ಹಾಗೂ ವಾಹನಗಳ ಸನ್ ಫಿಲ್ಮ್ ಗಳನ್ನು ಅಳವಡಿಸಲಾಗಿದೆ.
ಸಂಚಾರ ವಿಭಾಗದ ಎಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಸುಮಾರು ೨೦ಕ್ಕೂ ಅಧಿಕ ಕಾರುಗಳ ಟಿಂಟ್ ಗ್ಲಾಸ್ ಗಳನ್ನು ತೆರವುಗೊಳಿಸಲಾಯಿತು. ಬಳಿಕ ಚಾಲಕರಿಗೆ ದಂಡ ವಿಧಿಸಲಾಯಿತು. ಹಾಗೂ ಎಚ್ಚರಿಕೆಯನ್ನು ಕೂಡ ನೀಡಲಾಯಿತು.
ಇನ್ನು ರಾಜ್ಯದಲ್ಲಿನ ವಾಹನಗಳಿಗೆ ಟಿಂಟ್ ಗ್ಲಾಸ್ ಗಳನ್ನು ಅಳವಡಿಸದಂತೆ ಈ ಹಿಂದೆಯೇ ಆದೇಶ ಹೊರಡಿಸಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಟಿಂಟ್ ಗ್ಲಾಸ್ ಬಳಸಿಕೊಂಡು ಓಡಾಟ ನಡೆಸುವ ವಾಹನಗಳ ಸಂಖ್ಯೆ ನಗರದಲ್ಲಿ ಹೆಚ್ಚುತ್ತಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿದ್ದು, ಮಂಗಳವಾರದಂದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.