ಮಂಗಳೂರು, ಅ.18 (DaijiworldNews/PY): ಶ್ರೀನಿವಾಸ್ ಆರೋಗ್ಯ ಕಾರ್ಡ್ ಲೋಕಾರ್ಪಣೆ ಕಾರ್ಯಕ್ರಮವು ಅ.16ರ ಶನಿವಾರ ಶ್ರೀನಿವಾಸ್ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಸಿ ಎ. ಎ ರಾಘವೇಂದ್ರ ರಾವ್ ಅವರು ಉದ್ಘಾಟಿಸಿದರು ಮತ್ತು ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ- ಕುಲಾಧಿಪತಿ ಡಾ. ಶ್ರೀನಿವಾಸ್ ಎ ರಾವ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಡಾ. ಉದಯ್ ಕುಮಾರ್ ರಾವ್, ಡೀನ್, ಶ್ರೀನಿವಾಸ್ ಮೆಡಿಕಲ್ ಕಾಲೇಜು ಇವರು ಅತಿಥಿಗಳನ್ನು ಸ್ವಾಗತಿಸಿ, ಅತಿಥಿಗಳಿಗೆ ಸಸ್ಯವನ್ನು ವಿತರಿಸಲಾಯಿತು.
ಡಾ. ಅಮಿತ್ ಕಿರಣ್ ಇವರು ಆಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳನ್ನು ತಿಳಿಸಿದರು. ಡಾ. ಅನಿತಾ ಶ್ರೀನಿವಾಸ್ ಆರೋಗ್ಯ ಕಾರ್ಡ್ನ ಸೌಲಭ್ಯಗಳನ್ನು ಸಭೆಗೆ ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿ ಗಣ್ಯರಿಗೂ ಹಾಗೂ ಮುಖಂಡರಿಗೂ ಸನ್ಮಾನಿಸಲಾಯಿತು.
ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜಸ್ನ ನಿರ್ದೇಶಕರು ವಿಜಯಲಕ್ಷ್ಮೀ, ಎ. ಶಾಮ ರಾವ್ ಫೌಂಡೇಶನ್ನ ಕಾರ್ಯದರ್ಶಿ ಮಿತ್ರ ಎಸ್ ರಾವ್, ರಿಜಿಸ್ಟ್ರಾರ್ ಆದಿತ್ಯ ಕುಮಾರ್ ಮಯ್ಯ, ಮಂಗಳೂರು ಪೋಲೀಸ್ ಕಮಿಷನರ್ ನಟರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀನಿವಾಸ್ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕ ಡಾ. ಡೇವಿಡ್ ಡಿ ಎಮ್ ರೊಸಾರಿಯೋ ಧನ್ಯವಾದ ಸಮರ್ಪಣೆಗೈದರು. ವೈಶಾಖ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.