ಮಂಗಳೂರು,ನ 13(MSP): ಮಂಗಳೂರು ಮಹಾನಗರ ಪಾಲಿಕೆಯೂ ವರ್ಷದ ಹಿಂದೆ ಸ್ವಚ್ಛತೆ, ತೆರಿಗೆ ನೆಪದಲ್ಲಿ ಬೀದಿ ಬದಿಯ ವ್ಯಾಪಾರಿಗಳ ಮೇಲೆ ದಾಳಿ ಮಾಡಿ ಅವರ ದುಡಿಮೆಯ ವಸ್ತುಗಳನ್ನು ತಂದು ಗುಡ್ಡೆ ಹಾಕಿದ್ದು, ಪುರಭವನ ಅವರಣದಲ್ಲಿ . ಸ್ವಚ್ಚ ಮಂಗಳೂರು ಸ್ಮಾರ್ಟ್ ಮಂಗಳೂರು ಎನ್ನುವ ಪಾಲಿಕೆಯೇ ಪುರಭವನದ ಅವರಣವನ್ನು ಕಸದ ದೊಡ್ಡಿಯನ್ನಾಗಿಸಿದೆ ಎಂದು ಆರೋಪಿಸಿ ಸೌರಜ್ ಮಂಗಳೂರು ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದೂವರೆ ಲಕ್ಷ ಬಾಡಿಗೆ ಪಡೆಯುವ ಪುರಭವನದೊಳಗಿನ ಪಾರ್ಕಿಂಗ್ ಜಾಗವು ಪಾಲಿಕೆಗೆ ಕಸ ಹಾಕುವ ಜಾಗವೇ? ದಾಳಿ ಮಾಡಿ ಒಂದು ವರ್ಷವಾದರೂ ಪಾಲಿಕೆ ವಶಪಡಿಸಿಕೊಂಡ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿಲ್ಲ. ಪ್ರಶ್ನಿಸಿದರೆ ಇ- ಟೆಂಡರ್ ನೆಪ ಹೇಳಲಾಗುತ್ತಿದೆ. ಒಂದು ವರ್ಷವಾದರೂ ವಿಲೇವಾರಿ ಯಾಕೆ ಮಾಡಿಲ್ಲ. ಪಾಲಿಕೆ ವಶಪಡಿಸಿಕೊಂಡು ರಾಶಿ ಹಾಕಿದ ವಸ್ತುಗಳಲ್ಲಿ ಬಡ ಬೀದಿ ವ್ಯಾಪಾರಿಗಳ ಕಣ್ಣೀರಿನ ಶಾಪ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಭವನದ ಸೌಂದರ್ಯ ಹಾಳು ಮಾಡುವ ಈ ಕಸದ ರಾಶಿಗೆ ಇಲ್ಲಿ ಕಾರ್ಯಕ್ರಮಗಳು ನಡೆದಾದ ಗಣ್ಯವ್ಯಕ್ತಿಗಳು, ಮಂತ್ರಿಗಳು ಬಂದಾಗ ಅವರಿಗೆ ಕಾಣಿಸಿದಂತೆ ಇಲ್ಲಿ ಅಡ್ಡವಾಗಿ ಪರದೆ ಹಾಕಲಾಗುತ್ತದೆ. ಒಂದು ವರ್ಷದಿಂದ ಮಾಧ್ಯಮಗಳು ಈ ಕುರಿತು ವರದಿ ಪ್ರಸಾರ ಮಾಡುತ್ತಿದ್ದರೂ ನಗರಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಬಡ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ ಪಾಲಿಕೆ ಸಾಧಿಸಿದ್ದಾದರೂ ಏನೂ? ಸುಸಜ್ಜಿತ ಮಾರುಕಟ್ಟೆ ಎನ್ನುವುದು ಇನ್ನೂ ದೂರದ ಮಾತು..ಈ ಕಸದ ರಾಶಿ ಪುರಭವನದ ಅ0ದ ಕೆಡಿಸಿದೆ, ಸೊಳ್ಳೆ, ಇಲಿ ಹೆಗ್ಗಣಗಳಿಗೆ ವಾಸ ಸ್ಥಾನ ಕಲ್ಪಿಸಿ ರೋಗ ಹರಡೋಕೆ ವ್ಯವಸ್ಥೆ ಮಾಡಿದೆ. ಹೀಕಾಗಿ ಇದರ ವಿಲೇವಾರಿ ಮಾಡಿ ತಕ್ಷಣ ಕೈಗೊಳ್ಳಬೇಕು ಎಂದು ಸೌರಜ್ ಮಂಗಳೂರು ತಮ್ಮ ವಿಡಿಯೋದಲ್ಲಿ ಒತ್ತಾಯಿಸಿದ್ದಾರೆ.