ಬಂಟ್ವಾಳ, ಅ. 15 (DaijiworldNews/SM): ಅಪಘಾತದಲ್ಲಿ ನಿಧನರಾದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಆಬೂಬಕ್ಕರ್ ಅವರ ಮೃತದೇಹವನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯಗೆ ತರಲಾಯಿತು.
ಇಲಾಖೆ ವತಿಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಸುಮಾರು 15 ನಿಮಿಷಗಳ ಕಾಲ ಅಂತಿಮ ದರ್ಶನ ಮಾಡಲು ಅವಕಾಶ ಮಾಡಿಕೊಡಲಾಗಿಯಿತು. ಬಳಿಕ ಅವರ ಸ್ವಂತ ಊರು ವೇಣೂರಿಗೆ ಪಾರ್ಥೀವ ಶರೀರ ಕೊಂಡೊಯ್ಯುಲಾಯಿತು. ನಾಳೆ ಅಂತಿಮ ಕ್ರಿಯೆ ಸರಕಾರಿ ಸಕಲ ಗೌರವಗಳೊಂದಿಗೆ ನಡೆಯಲಿದೆ.