ಕಾಸರಗೋಡು, ಅ.15 (DaijiworldNews/PY): ಉಪ್ಪಳ ಸಮೀಪದ ಮಂಗಲ್ಪಾಡಿ ಶಾಲೆಯಲ್ಲಿ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದು, ಶಾಲಾ ಕ್ರೀಡಾ ವಿಭಾಗದ ಕೊಠಡಿಗೆ ನುಗ್ಗಿ ಸುಮಾರು 25 ಸಾವಿರ ರೂ. ಮೌಲ್ಯದ ಕ್ರೀಡೋಪಕರಣಗಳನ್ನು ಕಳವುಗೈದ ಘಟನೆ ನಡೆದಿದೆ.
ತೆಂಗಿನೆಣ್ಣೆ ಪ್ಯಾಕೆಟ್ಗಳನ್ನು ತಂದು ಎಣ್ಣೆಯನ್ನು ನೆಲದಲ್ಲಿ ಚೆಲ್ಲಲಾಗಿದೆ. ಮೈಕ್ರೊಫೋನ್, ಫುಟ್ಬಾಲ್, ಕ್ರಿಕೆಟ್ ಬ್ಯಾಟ್, ಬಾಲ್, ವಾಲಿಬಾಲ್ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಲಾಗಿದೆ.
ಶಾಲಾ ಕೊಠಡಿಗಳ ಕಿಟಿಕಿಗಳನ್ನು ಹಾಗೂ ಬಾಗಿಲುಗಳನ್ನು ಹಾನಿಗೊಳಿಸಲಾಗಿದೆ.
ಶಾಲೆಯ ವಠಾರದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದೆ.
ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.