ನವದೆಹಲಿ,ನ 13(MSP): ಕರ್ನಾಟಕ ಉಡುಪಿ ಜಿಲ್ಲೆಯ ಪಾದೂರಿನಲ್ಲಿ ನಿರ್ಮಿಸಲಾಗಿರುವ ಭೂಗತ ತೈಲ ಸಂಗ್ರಹಗಾರಕ್ಕೆ ತೈಲ ಪೂರೈಕೆ ಮಾಡುವ ಗುತ್ತಿಗೆಯ ಬಗ್ಗೆ ಭಾರತ ಮತ್ತು ಸೌದಿ ಅರೇಬಿಯ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಅಂಶವನ್ನು ಕೇಂದ್ರ ಸರ್ಕಾರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಅಬುಧಾಬಿಯಲ್ಲಿ ತಿಳಿಸಿದ್ದಾರೆ.
ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ ಜತೆ ಇದು ಸಹಿ ಹಾಕಲಾಗಿರುವ ಎರಡನೇ ಒಪ್ಪಂದ ಎಂದು ಪ್ರಧಾನ್ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸಂಪುಟ ಸಭೆ ಪಾದೂರಿನಲ್ಲಿ ನಿರ್ಮಿಸಲಾಗಿರುವ ಭೂಗತ ತೈಲ ಸಂಗ್ರಹಾಗಾರಕ್ಕೆ ವಿದೇಶಿ ಕಂಪನಿಗಳು ತೈಲ ಪೂರೈಸಲು ಅವಕಾಶ ನಿಡುವ ಸರಕಾರಿ-ಖಾಸಗಿ ಸಹಭಾಗಿತ್ವದ ಪ್ರಸ್ತಾಪವನ್ನು ಅನುಮೋದಿಸಿತ್ತು.
ಯುಎಇಯ ಎಡಿಎನ್ ಒಸಿ ಸಂಸ್ಥೆ ಮಂಗಳೂರಿನಲ್ಲಿರುವ ಭೂಗತ ಸ್ಥಾವರಕ್ಕೆ ಕಚ್ಚಾತೈಲ ಪೂರೈಕೆ ಬಗ್ಗೆ ಫೆಬ್ರವರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಪಾದೂರಿಗೆ ಸಂಬಂಧಿಸಿದಂತೆ ಅದೇ ಮಾದರಿಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಒಪ್ಪಂದದಿಂದ ಪಾದೂರುಗೆ ಅಥವಾ ಮಂಗಳೂರು ಭೂಗತ ತೈಲ ಸಂಗ್ರಹಕಾರದಲ್ಲಿರುವ ಕಚ್ಚಾ ತೈಲವನ್ನು ಸ್ಥಳೀಯ ರಿಫೈನರಿಗಳಿಗೆ ಮಾರುವ ಹಕ್ಕು ಅಬುದಾಭಿ ಕಂಪನಿಗೆ ಸಿಗಲಿದೆ. ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮೊದಲ ಅಧ್ಯತೆಯಲ್ಲಿ ಕಚ್ಚಾ ತೈಲ ಮಾರಾಟಬೇಕಾಗುತ್ತದೆ.