ಹರಿಹರ,ನ 13(MSP): ಬಡವರಿಗೆ ವಿತರಿಸಬೇಕಾಗಿದ್ದ, ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಕಾಂಗ್ರೆಸ್ ನಾಯಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈ ಅಕ್ರಮ ಮಾರಾಟ ಜಾಲದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಅಬ್ದುಲ್ ಲತೀಫ್ ಮತ್ತು ಆತನ ಆಪ್ತರು ಭಾಗಿಯಾಗಿದ್ದು, ಈ ಬಗ್ಗೆ ಹರಿಹರ ತಾಲೂಕಿನ ಮಲೆಬೆನ್ನೂರು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅಂತೆಯೇ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ದಾಳಿ ಮಾಡಿದ ಮಲೆಬೆನ್ನೂರು ಪೊಲೀಸರು ಕಾಂಗ್ರೆಸ್ ಲೀಡರ್ ಅಬ್ದುಲ್ ಲತೀಫ್ ಹಾಗೂ ಆತನ ಸಹಚರರಾದ ಸರ್ ಅಲಿ, ರಜಾಕ್, ನಧೀರ್ ನನ್ನು ಬಂಧಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿದ ಬಡವರ ಪಾಲಿಗೆ ಸೇರಬೇಕಿದ್ದ ಅನ್ನಭಾಗ್ಯದ ಅಕ್ಕಿಯ ಮಾರಾಟ ದಂಧೆಯನ್ನು ಅಬ್ದುಲ್ ಲತೀಫ್ ಹಾಗೂ ಮತ್ತವರ ತಂಡ ಮಾಡುತ್ತಿದ್ದರು. ಕದ್ದ ಅನ್ನ ಭಾಗ್ಯದ ಅಕ್ಕಿಯನ್ನು ಪಾಲಿಶ್ ಮಾಡಿಸಿ, ನಂತರ ಅವುಗಳನ್ನು ಪ್ಯಾಕೇಟ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 17 ಟನ್ ಅನ್ನಭಾಗ್ಯದ ಅಕ್ಕಿ ಹಾಗೂ ಒಂದು ಲಾರಿಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಈ ದಾಳಿಯು ಡಿಸಿಪಿ ಇನ್ಸೆಫೆಕ್ಟರ್ ದೇವರಾಜ್ ನೇತೃತ್ವದಲ್ಲಿ ನಡೆದಿದ್ದು, ಆರೋಪಿಗಳ ಮೇಲೆ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.