ಮಂಗಳೂರು, ಅ.14 (DaijiworldNews/PY): ಇಂದು ವಿಜಯದಶಮಿಯ ಆಯುಧ ಪೂಜಾ ಕಾರ್ಯಕ್ರಮದ ಹಿನ್ನೆಲೆ ಬೋಂದೆಲ್ನಲ್ಲಿರುವ ದಾಯ್ಜಿವಲ್ಡ್ ಮಾಧ್ಯಮ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿತು.
ಈ ವೇಳೆ ಕಂಪ್ಯೂಟರ್, ಕ್ಯಾಮೆರಾ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಿಗೆ, ವಾಹನಗಳಿಗೆ ಪೂಜೆ ನೆರವೇರಿತು.
ದಾಯ್ಜಿವಲ್ಡ್ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ದಾಯ್ಜಿವಲ್ಡ್ನ ನಿರ್ದೇಶಕ ಮೆಲ್ವಿನ್ ರೊಡ್ರಿಗಸ್, ಮಾನವ ಸಂಪನ್ಮೂಲ ನಿರ್ದೇಶಕ ರೊನಾಲ್ಡ್ ನಜರತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕರಾವಳಿಯಲ್ಲಿ ಜನರು ಪೂಜೆ ನೆರವೇರಿಸಿ ಸಂಭ್ರಮದಿಂದ ಆಯುಧ ಪೂಜೆ ನೆರವೇರಿಸಿದರು. ವಾಹನ, ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸಿ, ಬಳಿಕ ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು.