ಮಂಗಳೂರು, ಅ.12 (DaijiworldNews/HR): ನವರಾತ್ರಿಯೆಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ. ಇತ್ತೀಚಿನ ದಿನಗಳಲ್ಲಿ ನವರಾತ್ರಿ ಸಂಧರ್ಭದಲ್ಲಿ ಅನೇಕ ಯುವತಿಯರು ನವ ದುರ್ಗೆಯರಂತೆ ತಯಾರಾಗಿ ಫೊಟೋಶೂಟ್ ಮಾಡಿಸಿಕೊಳ್ಳುತ್ತಿರುವುದು ರೂಢಿಯಲ್ಲಿದ್ದು, ಸದ್ಯ ಬೆಂಗಳೂರಿನ ಸೌಮ್ಯ ಅವರು ದೇವಿ ರೂಪದಲ್ಲಿ ಕಂಗೊಳಿಸುತ್ತಿರುವ ಪೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಮೆಕಪ್ ಆರ್ಟಿಸ್ಟ್ ಪ್ರತಿಭಾ ದಯಾ ಕುಕ್ಕಾಜೆಯವರ ಕೈ ಚಳಕದಲ್ಲಿ ಮೂಡಿರುವ ದೇವಿ ಮೇಕಪ್, ದಯಾ ಕುಕ್ಕಾಜೆಯವರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿ ದೇವಿ ಅವತಾರದ ಈ ವೈಭವ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೌಮ್ಯ, ನಾನು ದೇವಿ ರೂಪದಲ್ಲಿ ಕಾಣಿಸಿಕೊಳ್ಳುವ ಅವಕಾಶವು ಅದ್ಭುತವಾಗಿದ್ದು, ಬಣ್ಣ, ಚಿತ್ರ ಎಲ್ಲವೂ ಕೂಡಾ ವಿಶೇಷವಾಗಿ ಮೂಡಿಬಂದಿದೆ ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗಷ್ಟೆ ಪ್ರತಿಭಾ ದಯಾ ಕುಕ್ಕಾಜೆಯವರು ಖ್ಯಾತ ಸಿಂಗರ್ ಅಖಿಲಾ ಪಜ್ಜಿಮಣ್ಣು, ಹಾಗೂ ನಟಿ ಸಪ್ತ ಪಾವೂರು ಅವರಿಗೆ ಮಾಡಿರುವ ಶಾರಾದ ದೇವಿಯ ಮೇಕಪ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿತ್ತು.