ಮಂಗಳೂರು, ಅ. 11 (DaijiworldNews/SM): ನವರಾತ್ರಿ ಪ್ರಯುಕ್ತ ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುವ ನೂತನ್ ಕ್ಲೋತ್ ಸೆಂಟರ್, ಮಡಂತ್ಯಾರು ಪ್ರಾಯೋಜಕತ್ವದ ’ನವರಂಗಿ ಸೀರೆ-ಫೋಟೊ ಸ್ಪರ್ದೆ’ ನೇರ ಪ್ರಸಾರ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಕಂಡುಬರುತ್ತಿದೆ. ಐದನೇ ದಿನದ ಸ್ಪರ್ದೆ ನಡೆದಿದ್ದು, ನೀಲಿ ಬಣ್ಣದ ಸೀರೆಗೆ ಕರಾವಳಿ ಸೇರಿದಂತೆ ವಿವಿಧೆಡೆಯಿಂದ ರೆಸ್ಪಾನ್ಸ್ ಸಿಕ್ಕಿದೆ.
ಇಂದಿನ ಸ್ಪರ್ಧೆಯಲ್ಲಿ ಕುಂಪಲದ ಮಿತ್ರ ನಗರದ ಬ್ರಮರಿ ತಂಡ ಬಹುಮಾನ ಗೆದ್ದುಕೊಂಡಿದೆ. ಬಳಗದವರು ವಿಜೇತರಾಗಿದ್ದಾರೆ. ಇನ್ನು ಮುಂದಿನ ಸ್ಪರ್ಧೆ ಮಂಗಳವಾರ ಹಳದಿ, ಬುಧವಾರ ಹಸಿರು, ಗುರುವಾರ ನವಿಲು ಹಸಿರು, ಶುಕ್ರವಾರ ನೇರಳೆ ಬಣ್ಣದ ಸೀರೆಯ ಸ್ಪರ್ಧೆ ನಡೆಯಲಿದೆ. ಇನ್ನು ಸ್ಪರ್ದೆಗೆ ಮಹಿಳೆಯರು ಪ್ರತಿ ದಿನ ಫೋಟೋಗಳನ್ನು ಕಳುಹಿಸಬಹುದಾಗಿದ್ದು ಪ್ರತಿದಿನ ಆಯ್ದ ಒಂದು ಚಿತ್ರಕ್ಕೆ ನಗದು ಬಹುಮಾನ ಹಾಗೂ ಕೊನೆಯ ದಿನ ತಲಾ ಹದಿನೈದು ಹಾಗೂ ಹತ್ತು ಸಾವಿರ ರೂಪಾಯಿಗಳ ನಗದು ಬಂಪರ್ ಬಹುಮಾನ ದೊರೆಯಲಿದೆ. ಇನ್ನು ಪವಿತ್ರ ಪೂಜಾರಿ ಈ ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ.