ಮಂಗಳೂರು: ದೈಜಿವರ್ಲ್ಡ್ ವಾಹಿನಿಯ 'ಪ್ರೈವೇಟ್ ಚಾಲೆಂಜ್ - ಸೀಸನ್ 2'ಗೆ ಪ್ರೇಕ್ಷಕರಿಂದ ಅದ್ಭುತ ಮೆಚ್ಚುಗೆ
Sat, Oct 09 2021 03:15:01 PM
ಮಂಗಳೂರು, ಅ.09 (DaijiworldNews/HR): ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ತುಳು ರಿಯಾಲಿಟಿ ಶೋ 'ಪ್ರೈವೇಟ್ ಚಾಲೆಂಜ್ - ಸೀಸನ್ 1' ಯಶಸ್ಸಿನ ನಂತರ, ಇದೀಗ ಎರಡನೇ ಸೀಸನ್ ಅಕ್ಟೋಬರ್ 3ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಿದ್ದು, 'ಪ್ರೈವೇಟ್ ಚಾಲೆಂಜ್-ಸೀಸನ್ 2' ನಲ್ಲಿನ ಹೊಸ ವಿಷಯ ಮತ್ತು ಬದಲಾವಣೆಗಳಿಗೆ ಪ್ರೇಕ್ಷಕರು ಅದ್ದೂರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಾಕ್ಡೌನ್ನ ಮೊದಲ ಹಂತದಲ್ಲಿ ವೀಕ್ಷಕರನ್ನು ರಂಜಿಸಲು ಪ್ರೈವೇಟ್ ಚಾಲೆಂಜ್ ಎಂಬ ರಿಯಾಲಿಟಿ ಶೋ ಅನ್ನು ಪ್ರಾರಂಬಿಸಿದ್ದು, ಲಾಕ್ಡೌನ್ ಸಮಯದಲ್ಲಿ ಚಲನಚಿತ್ರಗಳು, ನಾಟಕ ಮತ್ತು ಯಕ್ಷಗಾನದಂತಹ ಮನರಂಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಆ ಸಮಯದಲ್ಲಿ ಪ್ರೈವೇಟ್ ಚಾಲೆಂಜ್ - ಸೀಸನ್ 1 ಪ್ರದರ್ಶನವು ಬಹಳ ಜನಪ್ರಿಯವಾಗಿತ್ತು. ವಯಸ್ಸು, ಲಿಂಗ, ಸಮುದಾಯ, ಜಾತಿ, ಭಾಷೆ ಮತ್ತು ಧರ್ಮವನ್ನು ಲೆಕ್ಕಿಸದೆ ಜನರು ಪ್ರದರ್ಶನವನ್ನು ಆನಂದಿಸಿದ್ದಾರೆ. ಇದಲ್ಲದೆ ಶಾಲೆಗೆ ಹೋಗುವ ಮಕ್ಕಳು ಪ್ರದರ್ಶನವನ್ನು ವೀಕ್ಷಿಸಲು ಭಾನುವಾರಕ್ಕಾಗಿ ಕಾಯುತ್ತಿದ್ದರು. 'ತುಳುನಾಡ ಮಾಣಿಕ್ಯ' ಅರವಿಂದ ಬೋಳಾರ್ ಮತ್ತು ವಾಲ್ಟರ್ ನಂದಳಿಕೆ ಇವರ ಜೋಡಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು.
"ಈ ಬಾರಿಯೂ 'ತುಳುನಾಡ ಮಾಣಿಕ್ಯ' ಅರವಿಂದ ಬೋಳಾರ್ ಮತ್ತು ವಾಲ್ಟರ್ ನಂದಳಿಕೆ ಜೋಡಿ ಪ್ರೇಕ್ಷರನ್ನು ರಂಜಿಸಲು ಮುಂದಾಗಿದ್ದು, ಎರಡನೇ ಸೀಸನ್ ನಲ್ಲಿ ನಂದಳಿಕೆ ಪಾತ್ರ ಸ್ವಲ್ಪ ಬದಲಾಗಿದ್ದು ಅವರು ಸಂದರ್ಶನಗಳನ್ನು ಮಾಡುವ ಬದಲು ಬೋಳಾರ್ ಜೊತೆಗೆ ವಿವಿಧ ಪಾತ್ರಗಳನ್ನು ಮಾಡಲಿದ್ದಾರೆ. ಸೀಸನ್ 1 ರಲ್ಲಿ ಅನೇಕ ಕಿರಿಯ ಕಲಾವಿದರಿದ್ದು, ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದ್ದು, ಇದೀಗ ಎರಡನೇ ಸೀಸನ್ ನಲ್ಲಿ ದಕ್ಷಿಣ ಕನ್ನಡದ ವಿವಿಧ ಮೂಲೆಗಳಿಂದ ಪೋಷಕ ಕಲಾವಿದರ ಗುಂಪೂ ಇದೆ.
ವೀಡಿಯೋ ಸಂಪಾದಕರಾಗಿ ನೊಯೆಲ್ ಪುತ್ತೂರು, ಛಾಯಾಗ್ರಾಹಕಗಿ ಕಿರಣ್ ಕೇಪು, ದುರ್ಗಾಪ್ರಸಾದ್ ಕಕ್ಕೆಪದವು ಮತ್ತು ದಯಾನಂದ್ ಕುಕ್ಕಾಜೆ ಅವರನ್ನೊಳಗೊಂಡ ತಾಂತ್ರಿಕ ತಂಡ ಕಾರ್ಯಕ್ರಮದ ಹಿಂದೆ ಕೆಲಸ ಮಾಡುತ್ತಿದೆ. ಕಲಾವಿದ ದಿನೇಶ್ ಅತ್ತಾವರ್ ಮೇಕಪ್ ನಿರ್ವಹಿಸುತ್ತಿದ್ದು, 'ಎಲೆಕ್ಟ್ರಿಕಲ್ ಪಾಯಿಂಟ್' ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾಗಿದ್ದಾರೆ.
ಇನ್ನು ಕಥೆ ಮತ್ತು ನಿರ್ದೇಶನ ವಿಭಾಗಗಳನ್ನು ಸ್ಟ್ಯಾನಿ ಬೇಳಾ ನಿರ್ವಹಿಸುತ್ತಾರೆ.