ಮಂಗಳೂರು ಅ13: ಡೈರೆಕ್ಟರೇಟ್ ಅಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿ.ಅರ್.ಐ) ಅಧಿಕಾರಿಗಳು ಇಂದು ಸಂಜೆ ಮಂಗಳೂರು ವಿಮಾನ ನಿಲ್ದಾನದಲ್ಲಿ ದುಬಾಯಿಯಿಂದ ಅಕ್ರಮವಾಗಿ ಚಿನ್ನ ತರುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂದಿತರಿಂದ 1936.08 ಗ್ರಾಂ ಚಿನ್ನದ ಬಿಲ್ಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ಚಿನ್ನ ಸಾಗಣಿಕೆಯ ಬಗ್ಗೆ ಖಚಿತ ಮಾಹಿತ ಮೇರೆಗೆ, ಇಂದು ಸಂಜೆ ದುಬಾಯ್ ಯಿಂದ ಏರ್ ಇಂಡಿಯಾ AI-814 ರಲ್ಲಿ ಬಂದಿಳಿದ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಿದಾಗ ನಾಲ್ವರು ಪ್ರಾಯಾಣಿಕರು ಅತಿಯಾದ ಎತ್ತರದ ಶೂ ಗಳನ್ನು ದರಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇವರ ಸೂಕ್ಶ್ಮ ತಪಾಸಣೆಯ ವೇಳೆ ಶೂ ಗಳ ಒಳಭಾಗದಲ್ಲಿ ಲಗತ್ತಿಸಿ ರೀತಿಯಲ್ಲಿ ಚಿನ್ನದ ಬಿಲ್ಲೆಗಳು ಪತ್ತೆಯಾಗಿವೆ. ವಶಪಡಿಸಿದ ಚಿನ್ನಕ್ಕೆ ಮಾರುಕಟ್ಟೆಯಲ್ಲಿ 57.5 ಲಕ್ಷ ರುಪಾಯಿ ಬೆಲೆ ಅಂದಾಜಿಸಲಾಗಿದೆ.
ಹಲವು ಭಾರಿ ಈ ರೀತಿ ಚಿನ್ನವನ್ನು ಅಕ್ರಮಾವಾಗಿ ಸಾಗಟ ಮಾಡಲಾಗಿದೆ ಎಂದು ಬಂಧಿತರು ಒಪ್ಪಿಕೊಂಡಿದ್ದಾರೆ. ಇವರ ಮೇಲೆ 1962ರ ಕಸ್ಟಮ್ಸ್ ಕಾಯ್ದೆ ಪ್ರಕಾರ ಕೇಸು ಧಾಕಲಿಸಲಾಗಿದೆ.ತನಿಖೆ ಮುಂದುವರಿಯುತ್ತಿದೆ.