ಬಳ್ಳಾರಿ, ನ 11 (MSP): ಕುಡಿದ ಮತ್ತಿನಲ್ಲಿ ಸತ್ಯ ಹೊರಬೀಳುತ್ತೇ ಎನ್ನುವ ಮಾತೊಂದಿದೆ. ಇದು ಹಡಗಲಿ ಪುರಸಭೆ ಸದಸ್ಯನೋರ್ವ ಪಾಲಿಗೆ ಅಕ್ಷರಶಃ ನಿಜವಾಗಿಯೇ ಪರಿಣಮಿಸಿದೆ. ತಾನು ಪಾನ ಮತ್ತಾಗಿ ಬಂದು ತನ್ನ ಪತ್ನಿಯ ಸಹೋದರಿಯ ತುಟಿಗೆ ಚುಂಬನ ನೀಡಿದ್ದು ಮಾತ್ರವಲ್ಲದೇ ಅದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ಬಳಿಕ ಫೋಟೋವನ್ನು ತಾನೇ ವಾಟ್ಸ್ಆ್ಯಪ್ ನಲ್ಲಿ ಹರಿಯಬಿಟ್ಟಿದ್ದಾನೆ.
ಇವರಿಬ್ಬರ ಪೋಟೋ ವೈರಲ್ ಆಗುತ್ತಿದ್ದಂತೆ ಕುಟುಂಬದಲ್ಲಿ ಪರಿಸ್ಥಿತಿ ವಿಷಮಿಸಿದೆ. ಇತ್ತ ಪೊಲೀಸರಿಗೆ ವಿಷಯ ಮುಟ್ಟುತ್ತಿದ್ದಂತೆ ಪುರಸಭೆ ಸದಸ್ಯನನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಕುಟುಂಬಸ್ಥರು ಇದು ನಮ್ಮ ನಮ್ಮ ಮನೆ ವಿಷಯ ಎಂದು ಹೇಳಿ ಸದಸ್ಯನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ನಾಲ್ಕು ದಿನಗಳ ಹಿಂದೆಯಷ್ಟೇ ನಾದಿನಿ ತನ್ನ ಅಕ್ಕ- ಭಾವನ ಮನೆಗೆ ಬಂದಿದ್ದಳು. ಮನೆಯಲ್ಲಿ ಯಾರೂ ಇರದ ಕಾರಣ, ಪಾನಮತ್ತರಾಗಿದ್ದ ಪುರಸಭೆ ಸದಸ್ಯ ಆಕೆಯ ತುಟಿಗೆ ಮುತ್ತು ನೀಡಿದ್ದರು ಎನ್ನಲಾಗುತ್ತಿದೆ.