ಕಾರ್ಕಳ, ಅ 08 (DaijiworldNews/MS): ಸಾಲ ನೀಡಿ ವಸೂಲಿಯ ನೆಪದಲ್ಲಿ ದಲಿತ ಯುವತಿಯೊಬ್ಬಳಿಗೆ ಅತ್ಯಾಚಾರವೆಸಗಿ, ಆಕೆಯ ನಗ್ನ ದೇಹವನ್ನು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣಗೊಳಿಸಿ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ನಗರ ಠಾಣಾ ಪೊಲೀಸರ ಬಂಧನಕ್ಕೊಳಗಾಗಿದ್ದ ಆರೋಪಿ ಪತ್ತೊಂಜಿಕಟ್ಟೆಯ ಸಾಧಿಕ್ನಿಗೆ ಕಾರ್ಕಳ ನ್ಯಾಯಾಲಯವು 15 ದಿನಗಳ ತನಕ ನ್ಯಾಯಾಂಗ ಬಂಧನ ವಿಧಿಸಿದೆ.
ಸಂತ್ರಸ್ತೆಗೆ ರೂ.೧೫,೦೦೦ ಸಾಲ ನೀಡಿದ ಆರೋಪಿ ಸಾದಿಕ್ ಮೊಬೈಲ್ ಫೋನ್ವೊಂದನ್ನು ನೀಡಿ ಹಣ ಹಿಂತಿರುಗಿಸುವಂತೆ ಒತ್ತಾಯಿಸಿ ಆಶ್ಲೀಲವಾಗಿ ಸಂಭಾಷಿಸುತ್ತಿದ್ದನಲ್ಲದೇ, ಆಕೆಯನ್ನು ಪತ್ತೊಂಜಿಕಟ್ಟೆಯ ಮನೆಯೊಂದಕ್ಕೆ ಕರೆಸಿ ಅಲ್ಲಿ ಅತ್ಯಾಚಾರವೆಸಗಿ ನಗ್ನಚಿತ್ರವನ್ನು ಚಿತ್ರೀಕರಿಸಿದ್ದನು.
ನಗ್ನಚಿತ್ರ ತನ್ನಲ್ಲಿ ಇರುವುದಾಗಿ ಮುಂದಿಟ್ಟು ಸಂತ್ರಸ್ತೆಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಆರೋಪಿ ಸಾದಿಕ್ ಮತ್ತೇ ಅದೇ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದನು. ಆತನ ಬೆದರಿಕೆಗೆ ಮಣಿದು ಆ ಮನೆಗೆ ಹೋದಾಗ ಸಂತ್ರಸ್ತೆಯನ್ನು ತಬ್ಬಿ ಹಿಡಿದು ಅತ್ಯಾಚಾರಕ್ಕೆ ಸಾದಿಕ್ ಪ್ರಯತ್ನಿಸಿದ್ದನು.
ಆರೋಪಿ ಸಾದಿಕ್ನನ್ನು ನಗರ ಠಾಣಾಧಿಕಾರಿ ಮಧು ಬಿಇ ಬಂಧಿಸಿದ್ದಾರೆ. ಡಿವೈಎಸ್ಪಿ ವಿಜಯಪ್ರಸಾದ್ ತನಿಖೆ ನಡೆಸಿದ್ದಾರೆ.