ಕಾಸರಗೋಡು, ನ 11 (MSP): ಅಧಿಕಾರ ಮತ್ತು ಸಂಪತ್ತು ಇರುವ ಕಡೆ ಅಭಿವೃದ್ಧಿ ಹೆಸರಲ್ಲಿ ಜನತೆಯನ್ನು ಬೀದಿಗೆ ತಳ್ಳಲಾಗುತ್ತಿದೆ ಇದೇ ಕಾರಣಕ್ಕೆ ಕೃಷಿಕರು , ಕಾರ್ಮಿಕರು , ದಲಿತರ ಬದುಕು ಬೀದಿಗೆ ಬಂದಿದೆ. ಬಂಡವಾಳಶಾಹಿಗಳಿಗೆ ಕೈಗೆ ಅಧಿಕಾರ ಒಪ್ಪಿಸಲಾಗಿದೆ ಎಂದು ಪರಿಸರ ಹೋರಾಟಗಾರ್ತೆ ಮೇಧಾ ಪಾಟ್ಕರ್ ಹೇಳಿದರು.
ಅವರು ನಾಳೆಯ ವಿಶ್ವ ನಮ್ಮದೇ ಎಂಬ ಘೋಷಣೆಯೊಂದಿಗೆ ಕಾಸರಗೋಡಿನಿಂದ ತಿರುವನಂತಪುರಕ್ಕೆ ನಡೆಯುತ್ತಿರುವ ಯುವಜನ ಒಕ್ಕೂಟದ ಪಾದಯಾತ್ರೆಗೆ ಶನಿವಾರ ಸಂಜೆ ಕಾಸರಗೋಡಿನಲ್ಲಿ ಚಾಲನೆ ನೀಡಿ ಮಾತನಾಡಿದರು. ಅಭಿವೃದ್ಧಿ ಹೆಸರಲ್ಲಿ ಪರಿಸರ ವನ್ನು ನಾಶ ಮಾಡಲಾಗುತ್ತಿದೆ. ಜನತೆಯ ಕೂಗನ್ನು ಸರಕಾರ ಕೇಳಬೇಕು. ಬಂಡವಾಳ ಶಾಹಿ ಗಳಿಂದ ದೇಶ ಮುಕ್ತಗೊಳಿಸಬೇಕು ಎಂದರು. ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಕಾರ್ಯಕ್ರಮ್ದ ಅಧ್ಯಕ್ಷತೆ ವಹಿಸಿದ್ದರು.
ದೇಶವನ್ನು ಕೋಮುವಾದ ಶಕ್ತಿಗಳಿಂದ ಮುಕ್ತಗೊಳಿಸಬೇಕು. ಜಾತ್ಯಾತೀತತೆಯನ್ನು ಉಳಿಸಬೇಕು. ಯುವಜನತೆ ಮುಂದೆ ಬರಬೇಕು. 2019 ರ ಲೋಕಸಭೆ ಚುನಾವಣೆ ಯಲ್ಲಿ ಕೋಮುವಾದಿ ಶಕ್ತಿಯನ್ನು ಅಧಿಕಾರಕ್ಕೆ ಬರದಂತೆ ತಡೆಯುವುದು ನಮ್ಮ ಗುರಿಯಾಗಬೇಕು ಎಂದು ಜಿಗ್ನೇಶ್ ಮೆವಾನಿ ಅಭಿಪ್ರಾಯಪಟ್ಟರು.
ಹೋರಾಟಗಾರ ಎಸ್ .ಪಿ . ಉದಯಕುಮಾರ್ , ವಿಜಯ್ ಚೌಹಾಣ್, ಸಿ .ಆರ್ ನೀಲಕಂಠನ್, ಅಂಬಲತ್ತರ ಕು೦ಞ ಕೃಷ್ಣನ್ ಮೊದಲಾದವರು ಮಾತನಾಡಿದರು. ಅದೀನ ಸುಂದರ್ ಪಾದಯಾತ್ರೆಯ ಮುಂದಾಳತ್ವ ವಹಿಸುತ್ತಿದ್ದು . ಡಿ .20 ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ ಮತೇತರತ್ವ, ಅಹಿಂಸೆ , ಪರಿಸರ ಸಂರಕ್ಷಣೆ ಘೋಷಣೆಯೊಂದಿಗೆ ಪಾದಯಾತ್ರೆ ನಡೆಯುತ್ತಿದೆ