ಮಂಗಳೂರು, ಅ. 01 (DaijiworldNews/SM): ಯುವಕರ ತಂಡವೊಂದಕ್ಕೆ ರೌಡಿಶೀಟರ್ ಗಳ ತಂಡವೊಂದು ಚಾಕು ತೋರಿಸಿ ಬೆದರಿಕೆಯೊಡ್ಡಿರುವ ಘಟನೆ ನಗರ ಹೊರ ವಲಯದ ಮೂಡುಶೆಡ್ಡೆಯಲ್ಲಿ ನಡೆದಿದೆ.
ಬುಧವಾರದಂದು ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಂಡ ಈ ಕೃತ್ಯ ಎಸಗಿದೆ. ಹಾಡು ಹಗಲೇ ಚಾಕು ತೋರಿಸಿ ಬೆದರಿಕೆಯೊಡ್ಡಿದೆ. ಇನ್ನು ಆರೋಪಿಗಳ ತಂಡ ಅವಾಚ್ಯವಾಗಿ ನಿಂದಿಸಿರುವ ಘಟನೆ ನಡೆದಿದೆ. ಅಲ್ಲದೆ, ಬೆದರಿಕೆಯನ್ನು ಕೂಡ ಒಡ್ಡಿದ್ದಾರೆ ಎಂದು ತಿಳಿದುಬಂದಿದೆ.