ಮಂಗಳೂರು, ಅ 08 (DaijiworldNews/MS): ಮರೋಳಿ ವಿಜಯನಗರ ಬಳಿ ಭಾನುವಾರ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಅದೇ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದೆ.ಮರೋಳಿ ಸಮೀಪದ ರೆಡ್ ಬಿಲ್ಡಿಂಗ್ ಎಂಬಲ್ಲಿ ಬುಧವಾರ ಮಧ್ನಾಹ್ನ ಸುಮಾರು 2.30ಕ್ಕೆ ಚಿರತೆ ಕಾಣಿಸಿಕೊಂಡಿದೆ.
ಸ್ಥಳೀಯ ನಿವಾಸಿ ಸುನಿತಾ ಎಂಬವರ ಮನೆ ಬಳಿ ಚಿರತೆ ಕಂಡುಬಂದಿದ್ದು ಅವರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿ ಸ್ಥಳಕ್ಕೆ ಆಗಮಿಸಿದ್ದು ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಕೆಲವು ಸಮಯದವರೆಗೆ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ. ಹೀಗಾಗಿ ಚಿರತೆ ಕಾಣಿಸಿಕೊಂಡ ಪ್ರದೇಶದ ಬಳಿ ಬೋನು ಇಡಲಾಗಿದೆ.
ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ಅವರ ಪ್ರತಿಕ್ರಿಯಿಸಿ , ಈಗಾಗಲೇ ಮರೋಳಿಯ ಜಯನಗರದ ಬಳಿ ಚಿರತೆ ಪತ್ತೆಯಾದ ಸ್ಥಳದ ಬಳಿ ಬುಧವಾರ ಮಧ್ಯಾಹ್ನ ಮತ್ತೆ ಚಿರತೆ ಪ್ರತ್ಯಕ್ಷ ಬಂದಿದೆ. ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಬೋನು ಇಡಲಾಗಿದೆ ಎಂದು ಹೇಳಿದ್ದಾರೆ.