ಮಂಗಳೂರು, ಅ 06 (DaijiworldNews/MS): ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಕಾರಿ ಹೇಳಿಕೆ ನೀಡುವುದು ಮೊದಲಾದ ಚಟುವಟಿಗಳ ಮೇಲೆ ಮಂಗಳೂರು ಪೊಲೀಸ್ ನ ಸಾಮಾಜಿಕ ಜಾಲತಾಣ ವಿಭಾಗವೂ ವಿಶೇಷ ನಿಗಾ ವಹಿಸಲು ಪ್ರಾರಂಭಿಸಿದೆ.
ಸಾಮಾಜಿಕ ಜಾಲತಾಣ ವಿಭಾಗವನ್ನು ವ್ಯವಸ್ಥಿತ್ತವಾಗಿ ಪುನರ್ ರೂಪಿಸಲಾಗಿದ್ದು ಆರು ಮಂದಿ ವೃತ್ತಿಪರ ತಂಡ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಅಪರಾಧಗಳನ್ನು ಕೂದಾ ಪತ್ತೆ ಹಚ್ಚಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ತಿಳಿಸಿದ್ದಾರೆ.