ಕಾಸರಗೋಡು, ಅ 05 (DaijiworldNews/MS): ಬೈಕ್ ಗಳಲ್ಲಿ ಸಾಗಾಟ ಮಾಡುತ್ತಿದ್ದ ಎಂ. ಡಿ .ಎಂ . ಎ ಮಾದಕ ವಸ್ತು ಹಾಗೂ ಗಾಂಜಾ ವನ್ನು ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಪೈವಳಿಕೆ ಬಾಯಿಕಟ್ಟೆಯ ಮುಹಮ್ಮದ್ ಸಮೀರ್ (22) ಮತ್ತು ಮುಹ ಮ್ಮದ್ ರಿಯಾಝ್ (28) ಬಂಧಿತರು. ಸಮೀರ್ ಸಂಚರಿಸುತ್ತಿದ್ದ ಬೈಕ್ ನಿಂದ 51 ಗ್ರಾಂ ಎಂ. ಡಿ.ಎಂ . ಎ ಮಾದಕ ವಸ್ತು ಹಾಗೂ ರಿಯಾಝ್ ಚಲಾಯಿಸುತ್ತಿದ್ದ ಬೈಕ್ ನಿಂದ 3 ಕಿಲೋ 100 ಗ್ರಾಂ ಗಾಂಜಾ ವನ್ನು ವಶಪಡಿಸಿಕೊಳ್ಳಲಾಗಿದೆ.
ಕಾಸರಗೋಡು ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸ ಲಾಗಿದ್ದು, ಪೈವಳಿಕೆ ಬಾಯಿಕಟ್ಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಬೈಕ್ ಗಳನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.