ಕಾಸರಗೋಡು, ಅ.04 (DaijiworldNews/HR): ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎರಡಂಕೆಗೆ ಇಳಿಕೆಯಾಗಿದ್ದು, ಸೋಮವಾರ ಜಿಲ್ಲೆಯಲ್ಲಿ ಕೇವಲ 92 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಎರಡನೇ ಅಲೆ ಆರಂಭವಾದ ಬಳಿಕ ಮೊದಲ ಬಾರಿ ಎರಡಂಕೆಗೆ ಇಳಿಕೆಯಾಗುತ್ತಿದೆ.
ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ 127 ಮಂದಿ ಗುಣಮುಖರಾಗಿದ್ದು, 1,283 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 10,466 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 1,34,471 ಮಂದಿಗೆ ಕೊರೊನಾ ಸೋಂಕು ತಗಲಿದ್ದು, 1,32,082 ಮಂದಿ ಗುಣಮುಖರಾಗಿದ್ದು, ಒಟ್ಟು 527 ಮಂದಿ ಮೃತಪಟ್ಟಿದ್ದಾರೆ.