ಮಂಗಳೂರು: ನವರಾತ್ರಿಗೆ ದಾಯ್ಜಿವಲ್ಡ್ ವಾಹಿನಿಯ ನವರಂಗಿ ಸೀರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ, ಬಹುಮಾನ ಗೆಲ್ಲಿ.!
Mon, Oct 04 2021 04:25:47 PM
ಮಂಗಳೂರು, ಅ.04 (DaijiworldNews/PY): ನವರಾತ್ರಿ ಬಂತೆಂದರೆ ಎಲ್ಲೆಡೆಯೂ ಹಬ್ಬದ ವಾತಾವರಣ. ನವರಾತ್ರಿ ನವ ದಿನಗಳು ದೇವಿಯ ಒಂಭತ್ತು ಸ್ವರೂಪಗಳ ಆರಾಧನೆ. ನವರಾತ್ರಿ ಹಬ್ಬ ದೇವಿ ಪೂಜೆಗೆಂದೇ ಸಮರ್ಪಿಸಲಾಗಿದೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯನ್ನು ಸ್ತ್ರೀ ತತ್ವದ ಮೂರು ಆಯಾಮಗಳಾಗಿ ನೋಡಲಾಗುತ್ತದೆ. ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ದಾಯ್ಜಿವಲ್ಡ್ ನವರಂಗಿ ಸೀರೆ ಫೋಟೋ ಸ್ಪರ್ಧೆ ಏರ್ಪಡಿಸಿದೆ.
ನೂತನ್ ಕ್ಲೋತ್ ಸೆಂಟರ್ ಮಡಂತ್ಯಾರು ಸಹಯೋಗದೊಂದಿಗೆ ಏರ್ಪಡಿಸಲಾಗುವ ಈ ಸ್ಪರ್ಧೆಯಲ್ಲಿ ನೀವು ಭಾಗವಹಿಸಿ 50 ಸಾವಿರ ರೂ. ಮೌಲ್ಯದ ಬಹುಮಾನ ನಿಮ್ಮದಾಗಿಸಬಹುದು. ಇದಕ್ಕಾಗಿ ನೀವು ಈ ಕೆಳಗೆ ನೀಡಲಾಗಿರುವ ಕೇವಲ ಸರಳ ನಿಯಮವನ್ನು ಅನುಸರಿಸಿ, ನೀಡಲಾಗಿರುವ ಆಯಾ ದಿನಕ್ಕೆ ತಕ್ಕಂತೆ ಸೀರೆ ಉಟ್ಟಿರುವ 3 ಮಂದಿ ಮಹಿಳೆಯರು ಅಥವಾ ಮೂವರಿಗಿಂತ ಹೆಚ್ಚಿರುವ ಗುಂಪಿನ ಪೋಟೋ ನಮಗೆ ಕಳುಹಿಸಬೇಕು.
ಈ ಸ್ಪರ್ಧೆಯು ಅಕ್ಟೋಬರ್ 7ರಿಂದ ಅಕ್ಟೋಬರ್ 15 ರವರೆಗೆ ನಡೆಯಲಿದ್ದು, ಅ.7ರಂದು ಬೂದು ಬಣ್ಣ, ಅ.8 ಕಿತ್ತಳೆ ಬಣ್ಣ, ಅ.9 ಬಿಳಿ ಬಣ್ಣ, ಅ.10 ಕೆಂಪು ಬಣ್ಣ, ಅ.11 ನೀಲಿ ಬಣ್ಣ, ಅ.12 ಹಳದಿ ಬಣ್ಣ, ಅ.13 ಹಸಿರು ಬಣ್ಣ, ಅ.14 ನವಿಲು ಹಸಿರು ಬಣ್ಣ ಹಾಗೂ ಅ.15ರಂದು ನೇರಳೆ ಬಣ್ಣದ ಸೀರೆಯನ್ನುಟ್ಟು ಗ್ರೂಪ್ ಫೋಟೋವೊಂದನ್ನು ದಾಯ್ಜಿವಲ್ಡ್ ವಾಹಿನಿಗೆ ಕಳುಹಿಸಿಕೊಡಬೇಕು.
ಫೋಟೋದಲ್ಲಿರುವ ಮಹಿಳೆಯರು ಆಯಾ ದಿನದಂತೆ ಸೂಚಿಸಿದ ಬಣ್ಣದ ಸೀರೆಯನ್ನು ಮಾತ್ರ ಉಡಬೇಕು. ಫೋಟೋಗಳನ್ನು ಬಣ್ಣಕ್ಕನುಸಾರವಾಗಿ ಆಯಾ ದಿನ 1 ಗಂಟೆಯೊಳಗೆ ಕಳುಹಿಸಿಕೊಡಬೇಕು. ತೀರ್ಪುದಾರರು ಆಯ್ದ ಫೋಟೋಗಳನ್ನು ಸಂಜೆ 6 ಗಂಟೆಯ ನವರಂಗಿ ಸೀರೆ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗುವುದು ಹಾಗೂ ಅತ್ಯುತ್ತಮ ತಂಡಕ್ಕೆ ಬಹುಮಾನ ಘೋಷಿಸಲಾಗುವುದು. ಫೋಟೋಗಳನ್ನು 7022604567 ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕು. ಫೋಟೋಗಳನ್ನು ಕಳುಹಿಸುವಾಗ ತಂಡದ ಹೆಸರು, ಊರು ಹಾಗೂ ಫೋನ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಸ್ಪರ್ಧೆಯಲ್ಲಿ ಜಯಶಾಲಿಯಾದ ತಂಡಕ್ಕೆ 50 ಸಾವಿರ ರೂ. ಮೌಲ್ಯದ ಬಹುಮಾನ ಸಿಗಲಿದೆ.
ಬನ್ನಿ ನಮ್ಮೊಂದಿಗೆ ನವರಾತ್ರಿ ಸಂಭ್ರಮದಲ್ಲಿ ಭಾಗಿಯಾಗಿ ಬಹುಮಾನ ಗೆಲ್ಲಿ.!