ಮಂಗಳೂರು, ಅ 04 (DaijiworldNews/MS): ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅ.2 ರಂದು ಪ್ರಯಾಣಿಕನೋರ್ವನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ.
ಭಟ್ಕಳ ಮೂಲದ ವ್ಯಕ್ತಿಯು ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 24 ಕ್ಯಾರೆಟ್ ನ 201.200 ಗ್ರಾಂ ತೂಕದ 9,57,712 ಚಿನ್ನದ ಬಿಸ್ಕೆಟ್, , 1,04,640 ರೂ ಮೌಲ್ಯದ 24 ಗ್ರಾಂ ಕ್ಯಾರೆಟ್ ನ 24 ಗ್ರಾಂ ತೂಕದ ಚಿನ್ನದ ನಾಣ್ಯ, 1,02,600 ಮೌಲ್ಯದ ಆಪಲ್ ಐ ಫೋನ್, 1,69,500 ರೂ ಮೌಲ್ಯದ12 ಸುಗಂಧದ್ರವ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ.