ಕಾಸರಗೋಡು, ಅ 04 (DaijiworldNews/MS): ಸಮುದ್ರದಲ್ಲಿ ಸ್ನಾನಕ್ಕಿಳಿದ ಪಶ್ಚಿಮ ಬಂಗಾಲ ಮೂಲದ ಯುವಕನೋರ್ವ ನಾಪತ್ತೆಯಾದ ಘಟನೆ ಬೇಕಲದಲ್ಲಿ ನಡೆದಿದೆ.
ಕೋಲ್ಕತ್ತಾದ ಶಫೀದ್ದುಲ್ ಇಸ್ಲಾಂ ( 24) ನಾಪತ್ತೆಯಾದವನು. ಭಾನುವಾರ ಸಂಜೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಅಲೆಗೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು , ಇದನ್ನು ಗಮನಿಸಿದ ಕೆಲ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದು , ಬಳಿಕ ಪೊಲೀಸರು , ಮೀನುಗಾರರು ಶೋಧ ನಡೆಸಿದ್ದು , ಪತ್ತೆ ಹಚ್ಚಲು ಸಾಧ್ಯವಾಗಿಲ್ಲ . ಶಫೀದ್ದುಲ್ ಇಸ್ಲಾಂ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ.