ಮಂಗಳೂರು, ಅ 02 (DaijiworldNews/MS): ದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯ ,ಅಸಹಕಾರ, ಅಹಿಂಸೆ ಎಂಬ ಅಸ್ತ್ರದ ಮೂಲಕ ಹೋರಾಡಿ, ದೇಶದ ಹಿರಿಮೆಯನ್ನು ವಿಶ್ವದಗಲಕ್ಕೂ ಪಸರಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಆದರೆ ಈ ನಡುವೆ ಇಂದು ಕರಾವಳಿ ಮೂಲದ ಎನ್ನಲಾದ ಎರಡು ಇನ್ಸ್ಟಾಗ್ರಾಮ್ ಟ್ರೋಲ್ ಪೇಜ್ ಗಳು ಸಾಮಾಜಿಕ ತಾಣದಲ್ಲಿ ರಾಷ್ಟ್ರಪಿತ ಗಾಂಧಿ ಭಾವಚಿತ್ರವನ್ನು ದೃಶ್ಯವೊಂದಕ್ಕೆ ಜೋಡಿಸಿ ಅಶ್ಲೀಲ ಹಾಗೂ ಅಸಭ್ಯವಾಗಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಇನ್ಸ್ಟಾಗ್ರಾಮ್ ಪೇಜ್ ಗಳಾದ ಟ್ರೋ ಮದರೆಂಗಿ ಮತ್ತು ಕುಡ್ಲಾ ಟ್ರೋಲ್ ಪೇಜ್ ಗಳಲ್ಲಿ ಅಶ್ಲೀಲ ನೃತ್ಯವೊಂದಕ್ಕೆ ಗಾಂದೀಜಿಯವರ ಮುಖ ಜೋಡಿಸಿ ಪೋಸ್ಟ್ ಮಾಡಲಾಗಿದೆ.
ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು , ಈ ಟ್ರೋಲ್ ಪೇಜ್ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.