ಮಂಗಳೂರು, ಅ13: ಬೆಂಗಳೂರಿನ ಪುಲಕೇಶಿ ನಗರದಲ್ಲಿ ನಡೆದ ಕಾಂಗ್ರೇಸ್ ಸಭೆಯಲ್ಲಿ ನಗರಾಭಿವೃದ್ಧಿ, ಮಾಹಿತಿ ಮತ್ತು ಹಜ್ ಸಚಿವ ರೋಷನ್ ಬೇಗ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ವಿರುದ್ದ ಚಕ್ರವರ್ತಿ ಸೂಳಿಬೆಲೆ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ತುಚ್ಚ ಪದಗಳನ್ನು ಬಳಸಿ ನಿಂದಿಸುವ ಮೂಲಕ ಕೆಟ್ಟ ಸಂಸ್ಕೃತಿ ಹುಟ್ಟಿಕೊಳ್ಳುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕು ಎನ್ನುವ ಆತಂಕ ವ್ಯಕ್ತಪಡಿಸಿದರು. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಮಂಗಳೂರಿಗೆ ಬಂದಿದ್ದ ಯುವ ಬ್ರಿಗೇಡ್ ನ ಮುಖಂಡ ಚಕ್ರವರ್ತಿ ಸೂಲಿಬೆಲೆ , ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ , ರಾಜ್ಯದಲ್ಲಿ ಆಳುವ ಪಕ್ಷದಲ್ಲಿದ್ದುಕೊಂಡು ಸಮಾಜದ ಗಣ್ಯರಾಗಿ, ಸಚಿವರಾಗಿ ರೋಷನ್ ಬೇಗ್, ರಾಷ್ಟ್ರದ ಆಡಳಿತದ ಚುಕ್ಕಾಣಿ ಹಿಡಿದವರನ್ನು ಈ ರೀತಿಯ ತುಚ್ಚ , ಅಸಭ್ಯ ಭಾಷೆಯಲ್ಲಿ ನಿಂದಿಸುವುದು ಅಕ್ಷಮ್ಯ . ಕೆಟ್ಟ ಪದಗಳ ನಿಂದನೆಯ ರಾಜಕೀಯ ನಮ್ಮ ಸಭ್ಯ ಸಮಾಜಕ್ಕೆ ಬೇಕಿಲ್ಲ . ಈ ಬಗ್ಗೆ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳವ ಅಗತ್ಯವಿದೆ ಎಂದರು. ಇದೇ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿಗೆ ನರಹಂತಕ ಪದ ಬಳಸಿದ್ದು, ಅರಣ್ಯ ಸಚಿವ ರಮಾನಾಥ್ ರೈ ನನ್ನನ್ನು (ಚಕ್ರವರ್ತಿ ಸೂಲಿಬೆಲೆ) ತುಚ್ಚ ಭಾಷೆಯಲ್ಲಿ ನಿಂದಿಸುದ್ದು ಉದಾಹರಿಸಿ ಅಸಂವಿಧಾನಿಕ ಪದಗಳ ಬಳಕೆ ಸಭ್ಯ ಸಮಾಜಕ್ಕೆ ಯೋಗ್ಯವಲ್ಲ ಎಂದರು. ಇನ್ನು ರಾಜಕಾರಣಿಗಳ ತುಚ್ಚ ಭಾಷಾ ಪ್ರಯೋಗಗಳ ವಿರುದ್ದ ಐ ಎಮ್ ಮೋದಿ ಎನ್ನುವ ವಾಟ್ಯಾಪ್ಸ್ ಡಿಪಿ ಮತ್ತು ಟ್ವೀಟರ್ ಮೂಲಕ ಕ್ಯಾಂಪೇನ್ ನಡೆಸಲಾಗುವುದು ಎಂದರು.
ಘಟನೆಯ ವಿವರ:
ಬೆಂಗಳೂರಿನಲ್ಲಿ ಕಾಂಗ್ರೇಸ್ ಸಭೆಯಲ್ಲಿ 500, 1000 ರೂ ನೋಟು ನಿಷೇಧದ ಬಗ್ಗೆ ಇಂದು ಮಾತನಾಡುತ್ತಿದ್ದ ರೋಷನ್ ಬೇಗ್, ಪ್ರಧಾನಿ ಮೋದಿ ನೋಟು ನಿಷೇಧ ಮಾಡಿದ್ದಕ್ಕೆ ಅಧಿಕಾರಕ್ಕೆ ತಂದವರೇ ಬೈಯ್ಯುತ್ತಿದ್ದಾರೆ. ಅಧಿಕಾರಕ್ಕೆ ಬಂದಾಗ ಮೋದಿಯನ್ನು ಹೊಗಳುತ್ತಿದ್ದವರೇ ಈಗ ನೋಟು ನಿಷೇಧ ಮಾಡಿದ ಮೇಲೆ ಈ ..... ಮಗ ಏನೆಲ್ಲಾ ಮಾಡಿಬಿಟ್ಟ' ಎಂದು ಬೈಯ್ಯುತ್ತಿದ್ದಾರೆಂದು ರೋಷನ್ ಬೇಗ್ ಹೇಳಿದ್ದರು. ಪ್ರಧಾನಿ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ ರಾಜ್ಯದ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.