ಕಾರ್ಕಳ, ಅ.01 (DaijiworldNews/HR): ಈದು ಗ್ರಾಮದ ನೂರಾಲ್ಬೆಟ್ಟು ಗ್ರಾಮದ ಅರಣ್ಯದಲ್ಲಿ ಮೇಯುತ್ತಿದ್ದ ದನವೊಂದು ಚಿರತೆಯ ದಾಳಿಗೆ ಬಲಿಯಾಗಿದೆ.
ಸಾಂದರ್ಭಿಕ ಚಿತ್ರ
ಚಿರತೆಯ ದಾಳಿಗೆ ಆನಂದ್ ಮೂಲ್ಯ ಅವರ ಸಾಕುದನ ಜೀವತೆತ್ತಿದೆ.
ತಾಲೂಕು ವೈದ್ಯಾಧಿಕಾರಿ ರಾಜಶೇಖರ್ ಮರಣೋತ್ತರ ಪರೀಕ್ಷೆ ವರದಿ ಸಲ್ಲಿಸಿದ್ದು, ಅರಣ್ಯಾಧಿಕಾರಿಗಳಾದ ನಾಗರಾಜ್ ಹಾಗೂ ಅರಣ್ಯ ರಕ್ಷಕ ಸಂದೀಪ್, ಈದು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಪೂಜಾರಿ, ಉಪಾಧ್ಯಕ್ಷ ಎನ್ ವಿಜಯ್ ಕುಮಾರ್ ಜೈನ್, ಪಂಚಾಯತ್ ಸದಸ್ಯರಾದ ಸುರೇಶ್ ಆಚಾರ್ಯ, ಪ್ರಶಾಂತ್ ಆಚಾರ್ಯ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಘಟನಾ ಸ್ಥಳದಲ್ಲಿಯೇ ದನದ ಮಹಜರ್ ನಡೆಸಿ ದಪನ ಮಾಡಲಾಯಿತು.