ತುಮಕೂರು, ನ 09(SM): ರಾಜ್ಯ ರಾಜಕೀಯದಲ್ಲಿ ನಾಯಕರು ಸಭ್ಯತೆ ಮರೆತು ಹೇಳಿಕೆ ನೀಡುತ್ತಿರುವುದು ಇವತ್ತು ನಿನ್ನೆಯದಲ್ಲ. ಇದಕ್ಕೆ ಮತ್ತೊಂದು ಸಾಕ್ಷಿಯಾಗಿದ್ದು, ತುಮಕೂರಿನಲ್ಲಿ. ಈ ಬಾರಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಭ್ಯತೆ ಮರೆತು ಹೇಳಿಕೆ ನೀಡಿದ್ದಾರೆ. ಪ್ರಧಾನಿಯವರನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನೋಟು ನಿಷೇಧ ಖಂಡಿಸಿ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವರು, ನೋಟು ರದ್ದತಿಯಲ್ಲಿ ನನಗೆ 50 ದಿನ ಕಾಲವಕಾಶ ಕೊಡಿ ಇದರಲ್ಲಿ ಗೆದ್ದು ಬರುತ್ತೇನೆ. ಒಂದು ವೇಳೆ ಬರದಿದ್ದರೆ ನನ್ನನ್ನ ಜೀವಂತವಾಗಿ ಸುಡಿ ಅಂತಾ ಪ್ರಧಾನಿ ಮೋದಿಯವರೇ ಹೇಳಿದ್ದರು. ಅವರ ಮಾತಿನಂತೆ ಬಹುಶಃ ಜೀವಂತವಾಗಿ ಸುಡುವ ಕಾಲ ಇಂದು ಬಂದಿದೆ ಎಂದು ಆಕ್ರೋಶದ ಮತುಗಳನ್ನು ಟಿ.ಬಿ. ಜಯಚಂದ್ರ ಆಡಿದ್ದಾರೆ.
ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ರಾಜಿನಾಮೇ ನೀಡಿ ಮನೆಗೆ ಹೊಗಲಿ. ಕೇಂದ್ರ ಸರ್ಕಾರದ ನಡೆ ಕತ್ತೆಗೆ ಹೋಲಿಕೆಯಾಗುತ್ತದೆ. ಅದು ಎಂದಿಗೂ ಕೆಲಸ ಮಾಡಿಲ್ಲ. ಆ ಕೆಲಸ ಮಾಡಿದ್ದು ಗುಳ್ಳೆನರಿ. ಪ್ರತಿಭಟನೆಗೆ ಆ ಗುಳ್ಳೆನರಿ ತಂದಿದ್ದರೆ ಬಹಳ ಚೆನ್ನಾಗಿರುತ್ತಿತ್ತು ಎಂದ ಸಚಿವರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯನ್ನ ಗುಳ್ಳೆನರಿಗೆ ಹೋಲಿಸಿ ವ್ಯಂಗ್ಯವಾಡಿದರು.