ಬಂಟ್ವಾಳ, ನ 09(SM): ಮಂಗಳೂರು ನಗರಕ್ಕೆ ನೀರು ಪೂರೈಸಲು ತುಂಬೆ ವೆಂಟೆಡ್ ಡ್ಯಾಂನಲ್ಲಿ 6 ಮೀ. ನೀರು ಸಂಗ್ರಹಿಸಿ ಮುಳುಗಡೆಯಾದ ಜಮೀನಿಗೆ ನೆಲಬಾಡಿಗೆ ಚೆಕನ್ನು ಬುಧವಾರ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಸಜೀಪಮುನ್ನೂರು ಗ್ರಾಮದ ಸಂತ್ರಸ್ತ ರೈತ ಎನ್.ಕೆ. ಇದಿನಬ್ಬ ಅವರಿಗೆ ವಿತರಿಸಿದರು.
ಈ ಸಂದರ್ಭ ಜಿಲ್ಲಾ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ತುಂಬೆ ಡ್ಯಾಂ ಸಂತ್ರಸ್ತ ರೈತ ಹೋರಾಟ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ಸರಪಾಡಿ ವಲಯ ರೈತ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮಹಮ್ಮದ್ ಶಾಫಿ ಮೊದಲಾದ ರೈತ ಮುಖಂಡರು ಉಪಸ್ಥಿತರಿದ್ದರು.
6 ಮೀಟರ್ ಎತ್ತರದ ವ್ಯಾಪ್ತಿಯ ಸಂತ್ರಸ್ತ ರೈತರು ಮುಳುಗಡೆ ಜಮೀನಿನ ಸೂಕ್ತ ಭೂ ದಾಖಲೆಗಳನ್ನು ಮನಪಾಕ್ಕೆ ಸಲ್ಲಿಸಿ ನೆಲಬಾಡಿಗೆ ಹಾಗೂ ಭೂ ಪರಿಹಾರ ಪಡೆದುಕೊಳ್ಳುವಂತೆ ಸಂತ್ರಸ್ತ ರೈತ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.