ಉಡುಪಿ, ಸೆ 30 (DaijiworldNews/MS): ಚಂಡೀಗಢದಿಂದ ಯುವಕನೊಂದಿಗೆ ನಾಪತ್ತೆಯಾಗಿದ್ದ ಬಾಲಕಿಯನ್ನುಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ರಕ್ಷಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಉತ್ತರಪ್ರದೇಶದ ಬಿಜ್ನೂರು ನಿವಾಸಿ ಮೊಹಮ್ಮದ್ ಸಾಧಿಕ್ ಚಂಡೀಗಡದ 16 ವರ್ಷದ ಬಾಲಕಿಯನ್ನು ಹತ್ತು ದಿನಗಳ ಹಿಂದೆ ಉಡುಪಿಗೆ ಕರೆದುಕೊಂಡು ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದ.
ಮಂಗಳವಾರ ಉಡುಪಿಯಿಂದ ಸೂರತ್ ಗೆ ತೆರಳಲು ಅವರು ರೈಲ್ವೇ ನಿಲ್ದಾಣಕ್ಕೆ ಹೋಗಿದ್ದ ವೇಳೆ ಚಂಡೀಗಢ ಪೊಲೀಸರು ನೀಡಿದ ಮಾಹಿತಿಯಂತೆ ರೈಲ್ವೆ ರಕ್ಷಣಾ ದಳದವರು ಜೋಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಇಬ್ಬರಿಗೂ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಉಡುಪಿ ನಗರ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.