ಕಾಸರಗೋಡು, ಸೆ.29 (DaijiworldNews/PY): ಜಿಲ್ಲೆಯಲ್ಲಿ ಬುಧವಾರ 128 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದುವರೆಗೆ 1,33,556 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ಇಂದು 381 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ 1,30,255 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 2,200 ಮಂದಿ ಚಿಕಿತ್ಸೆಯಲ್ಲಿದ್ದು, 12,150 ಮಂದಿ ನಿಗಾದಲ್ಲಿದ್ದಾರೆ.
ಕೊರೊನಾ ಸೋಂಕಿಗೆ ಈವರೆಗೆ 525 ಮಂದಿ ಮೃತಪಟ್ಟಿದ್ದಾರೆ.