ತಿರುವನಂತಪುರ, ನ 09 (MSP): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಸಿಗುವ ಪ್ರಸಾದ ರುಚಿ ಸವಿದವನೇ ಬಲ್ಲ..ಅಷ್ಟು ಸ್ವಾದೀಷ್ಟವಾದ ಪ್ರಸಾದದ ರುಚಿಯನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಅದರ ರುಚಿ ಸವಿದಿರುತ್ತಾರೆ. ಶಬರಿಮಲೆಯಲ್ಲಿ ಎರಡು ರೀತಿಯ ಪ್ರಸಾದಗಳಿವೆ . ಅವುಗಳೆಂದರೆ 'ಅಪ್ಪಮ್' ಮತ್ತು 'ಅರವಣ' ಪ್ರಸಾದ. ಆದರೆ ’ಅರವಣ ಪಾಯಸ ಪ್ರಸಾದ’ದ ಮೇಲೆ ಇದೀಗ ಸಿಂಗಾಪುರದ ಕಾಕಾದೃಷ್ಟಿ ಬಿದ್ದಿದೆ.
ಸಿಂಗಾಪುರ ಮೂಲದ ಕೃಷಿ ಉದ್ದಿಮೆ ಕಂಪೆನಿಯ 'ಅರವಣ' ಎಂಬ ಹೆಸರಿನ ಹಕ್ಕುಸ್ವಾಮ್ಯ ತನ್ನದು ಎಂದಿದೆ. ಸಿಂಗಾಪುರ ವಿಲ್ಮಾರ್ ಇಂಟರ್ನ್ಯಾಷನಲ್ ಎಂಬ ಕಂಪೆನಿಯ ಕ್ಯುವಕ್ ಆಯಿಲ್ ಆ್ಯಂಡ್ ಗ್ರೈನ್ಸ್ ಟ್ರೇಡಿಂಗ್ ಪಿಟಿಇ ಲಿಮಿಟೆಡ್ (Kuk Oil & Grrains Trading Pte Ltd) ಅರವಣ ಎಂಬ ಹೆಸರು ತನ್ನದು ಎಂದು ಕೋಲ್ಕತಾದಲ್ಲಿರುವ ಟ್ರೇಡ್ಮಾರ್ಕ್ ನೋಂದಣಿ ಮಾಡಿಕೊಳ್ಳುವ ಕಚೇರಿಗೆ ಅರ್ಜಿ ಸಲ್ಲಿಸಿದೆ.
ಶಬರಿಮಲೆಯಲ್ಲಿ ನೀಡುವ ಅರವಣ' ಪಾಯಸ ಪ್ರಸಾದದ ಹೆಸರು ತಮ್ಮ ಕಂಪೆನಿಯ ಉತ್ಪನ್ನಗಳ ಹೆಸರಿಗೆ ಸನಿಹದ ಹೋಲಿಕೆ ಇದೆ ಎನ್ನುವುದ ಎನ್ನುವುದು ಸಿಂಗಾಪುರ ಮೂಲದ ಸಂಸ್ಥೆಯ ವಾದವಾಗಿದೆ. ಈ ಅರ್ಜಿಯಿಂದ ಹೆಚ್ಚೆತ್ತುಕೊಂಡ ಕ್ಷತ್ರಿಯ ಕ್ಷೇಮ ಸಭಾ ಸಂಘಟನೆ ಪ್ರತಿ ದೂರು ನೀಡಿ ಆಕ್ಷೇಪ ವ್ಯಕ್ತಪಡಿಸಿದ್ದು ಕಂಪೆನಿಯ ಪ್ರಯತ್ನಕ್ಕೆ ತಡೆಯೊಡ್ದುವ ಪ್ರಯತ್ನವನ್ನು ಮುಂದಿವರಿಸಿದೆ.
ಇನ್ನು ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಅಯ್ಯಪ್ಪ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಆಯುಕ್ತ ಎನ್.ವಾಸು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂತಹ ಹುನ್ನಾರ ನಮ್ಮ ಗಮನಕ್ಕೆ ಬಂದಿರಲಿಲ್ಲ. ಅರವಣ ಎನ್ನುವುದು ಅಯ್ಯಪ್ಪ ಸ್ವಾಮಿಯ ಪ್ರಸಾದ. ಇದನ್ನು ವಾಣಿಜ್ಯಿವಾದ ಚಟುವಟಿಕೆ ಎಂದು ನಾವು ಯಾವತ್ತೂ ಭಾವಿಸಿಲ್ಲ. ಇದೇ ದೃಷ್ಟಿಯಿಂದ ನಾವು ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿರಲಿಲ್ಲ ಎಂದಿದ್ದಾರೆ.