ನವದೆಹಲಿನ 09 (MSP): ಮಂಗಳೂರು ವಿಮಾನ ನಿಲ್ದಾಣವನ್ನು ಸಾರ್ವಜನಿಕ- ಖಾಸಗಿ ಸಹಬಾಗಿತ್ವ ಮಾದರಿಯಲ್ಲಿ ವಿಶ್ವದರ್ಜೆಗೇರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ನವದೆಹಲಿಯಲ್ಲಿ ಗುರುವಾರ ನಡೆದ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಮಂಗಳೂರು ಹಾಗೂ ಆರು ವಿಮಾನ ನಿಲ್ದಾಣಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡಲು ತೀರ್ಮಾನಿಸಲಾಗಿದೆ. ಬೆಂಗಳೂರು, ಹೈದರಬಾದ್ ಕೊಚ್ಚಿ ವಿಮಾನ ನಿಲ್ದಾಣಗಳಂತೆ ಅಭಿವೃದ್ದಿ ಹಾಗೂ ನಿರ್ವಹಣೆಯನ್ನು ಪಿಪಿಪಿ ಮಾದರಿಯಲ್ಲಿ ನಡೆಸಲಾಗುತ್ತಿದೆ. ಇದು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಲಾಭವನ್ನು ತಂದುಕೊಟ್ಟಿದೆ.
ಹಾಗಾಗಿ ಮಂಗಳೂರು ಜೈಪುರ, ಅಹಮದಾಬಾದ್, ಲಕ್ನೋ, ಗುವಾಹಾಟಿ, ತಿರುವನಂತಪುರ ನಿಲ್ದಾಣಗಳನ್ನು ಇದೇ ರೀತಿ ಅಭಿವೃದ್ದಿಗೊಳಿಸಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ಈ ವಿಮಾನ ನಿಲ್ದಾಣಗಳು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯಾಪ್ತಿಯಲ್ಲಿದೆ.