ಕಡಬ, ಸೆ 25 (DaijiworldNews/MS): ಮಸಾಜ್ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಲ್ಲಿನ ಕಳಾರ ಬಳಿಯ ಸ್ನೇಹ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯದ ಮಾಲೀಕ ಸೇರಿದಂತೆ ಮೂವರನ್ನು ಕಡಬ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಚಿಕಿತ್ಸಾಲಯದ ಮಾಲೀಕ ಕೇರಳದ ವಯನಾಡು ಮೂಲದ ಅಬ್ರಹಾಂ, ಅನೀಶ್ ಮತ್ತು 25 ವರ್ಷದ ಯುವತಿಯಾಗಿದ್ದಾಳೆ. ಹೊರ ಊರುಗಳಿಂದ ಮಸಾಜ್ ನೆಪದಲ್ಲಿ ಯುವತಿಯರನ್ನು ಕರೆಸಿಕೊಂಡು ಲೈಂಗಿಕವಾಗಿ ಬಳಸಲಾಗುತ್ತಿತ್ತು ಎಂಬ ಆರೋಪವೂ ಇವರ ವಿರುದ್ದ ಕೇಳಿಬಂದಿದೆ.
ಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ವಿಡಿಯೋ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಸಂತ್ರಸ್ತ ಮಹಿಳೆಯರು ಕಡಬ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿದ ಪೊಲೀಸರು ಮೂವರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.