ಮಂಗಳೂರು, ಸೆ.24 (DaijiworldNews/HR): ಕ್ಯಾನ್ಸರ್ ರೋಗದಿಂದ ತಲೆ ಕೂದಲು ನಷ್ಟವಾಗುವ ರೋಗಿಗಳಿಗೆ ತಲೆ ಹೊದಿಕೆ ತಯಾರಿಸಲು ತನ್ನ ಕೇಶವನ್ನು ದಾನ ಮಾಡಿದ್ದಾಳೆ 11 ರ ಹರೆಯದ ಮಂಗಳೂರು ಯಕ್ಕೂರಿನ ಡಿಲ್ನಾ ರಾಜೇಶ್.
ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿಯ ಕಾಂಕೋಲ್ ನವರಾದ ಯಕ್ಕೂರಿನ ಡಿಲ್ನಾ ರಾಜೇಶ್ ಮಂಗಳೂರು ಕೇಂದ್ರೀಯ ವಿದ್ಯಾಲಯ ಸಂಖ್ಯೆ 2 ರ ಆರನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಕೂದಲು ಕಳೆದುಕೊಂಡ ಜನರಿಗೆ ವಿಗ್ ತಯಾರಿಸಲು ತಮ್ಮ ಕೇಶವನ್ನು ದಾನ ಮಾಡಿದ್ದಾಳೆ. 9ರ ಹರೆಯದಲ್ಲಿ ತನ್ನ ಕೂದಲನ್ನು ದಾನ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಕಳೆದ ಎರಡು ವರ್ಷದಿಂದ ಕೂದಲನ್ನು ಕತ್ತರಿಸದೆ ಬೆಳೆಸಲಾಯಿತು.
ಜನವರಿ 14 ರಂದು ತನ್ನ 11 ನೇ ಹುಟ್ಟುಹಬ್ಬದಂದು ನೀಡಲು ನಿರ್ಧಾರ ತೆಗೆದುಕೊಳ್ಳಲಾಗುತ್ತು, ಆದರೆ ಕೋವಿಡ್ ಹರಡುವಿಕೆ ಮತ್ತು ಲಾಕ್ ಡೌನ್ ನಿಂದ ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ 22 ರಂದು ತನ್ನ ಕೇಶವನ್ಬು ಕೊಡುಗೆ ನೀಡಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ನೀಡಲು ಕೂದಲನ್ನು ಸಂಗ್ರಹಿಸುವಲ್ಲಿ ನೈಪುಣ್ಯತೆ ಇರುವ ಮಂಗಳೂರು ಬಿಜೈ ನ್ಯೂ ರೋಡ್ ಪ್ಯಾರಡೈಸ್ ಸ್ಟ್ರೀಕ್ ಕಟ್ಟಡದಲ್ಲಿರುವ ಯಚ್ಚೂಸ್ ಹೇರ್ ಗ್ಯಾರೇಜ್ನಿಂದ ಕೂದಲನ್ನು ಸ್ವಚ್ಛಗೊಳಿಸಿ ಕತ್ತರಿಸಿ ಬಡ ಕ್ಯಾನ್ಸರ್ ರೋಗಿಗಳಿಗಾಗಿ ವಿಗ್ಗಳನ್ನು ತಯಾರಿಸಿ ನೀಡುವ ಕೇರಳ ತ್ರಿಶೂರಿನ ಮಿರಾಕಲ್ ಚಾರಿಟೇಬಲ್ ಅಸೋಸಿಯೇಶನ್ ನೇತೃತ್ವದ ಹೇರ್ ಬ್ಯಾಂಕ್ಗೆ ಕೂದಲನ್ನು ಕಳುಹಿಸಲಾಯಿತು.
ಇನ್ನು ರೈಲು ಪ್ರಯಾಣದ ಸಮಯದಲ್ಲಿ, ತಿರುವನಂತಪುರಂ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದಲ್ಲಿ ಚಿಕಿತ್ಸೆಯಲ್ಲಿರುವ ಕೂದಲು ಉದುರುವ ಕ್ಯಾನ್ಸರ್ ರೋಗಿಗಳನ್ನು ನೋಡಿದ ಮೇಲೆ ಮನಸ್ಸಿನಲ್ಲಿ ಉಂಟಾದ ನಿರ್ಧಾರದಂತೆ ಕೇಶವನ್ನು ದಾನ ಮಾಡಲಾಯಿತು. ಹೊಸ ಕೂದಲು ಬೆಳೆದಾಗ ವಾಪಸ್ ನೀಡುವುದಾಗಿ ದಿಲ್ನಾ ಹೇಳುತ್ತಾಳೆ.
ಡಿಲ್ನಾ ಮಂಗೂರಿನ ಮಲಯಾಳ ಮನೋರಮಾ ಪತ್ರಿಕೆಯ ವರದಿಗಾರ ರಾಜೇಶ್ ಕುಮಾರ್ ಕಾಂಕೋಲ್ ಮತ್ತು ಯೆನಪೋಯ ಕಾಲೇಜಿನ ಉಪನ್ಯಾಸಕಿ ಕೆ.ಎಂ.ಜಮುನಾ ದಂಪತಿಗಳ ಪುತ್ರಿ.