ಮಂಗಳೂರು, ನ 07(SM):ಎಟಿಎಂ ನಿಂದ ಹಣ ವಿತ್ ಡ್ರಾ ಮಾಡುವ ಸಂದರ್ಭ ವಿಳಂಬವಾಗಿದ್ದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರ ಮೇಲೆ ಮೂವರು ಹಲ್ಲೆ ನಡೆಸಿದ ಘಟನೆ ಮಂಗಳೂರು ಹೊರ ವಲಯದ ಕೈಕಂಬದ ಗಂಜಿಮಠ ಜಂಕ್ಷನ್ ನಲ್ಲಿ ನಡೆದಿದೆ.
ಕೈಕಂಬ ನಿವಾಸಿ ಅಶ್ರಫ್(30) ಹಲ್ಲೆಗೊಳಗಾದ ವ್ಯಕ್ತಿ. ಇವರು ಗಂಜಿಮಠದಲ್ಲಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡುತ್ತಿದ್ದರು. ಈ ಸಂದರ್ಭ ಸ್ವಲ್ಪ ವಿಳಂಬವಾಗಿದೆ. ಇದನ್ನೇ ನೆಪವಾಗಿಸಿಕೊಂಡು ಬಳಿಕ ಬಂದ ಮೂವರು ಅಶ್ರಫ್ ರನ್ನು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೆ, ಅವರ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಅಶ್ರಫ್ ಕೂಡ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ.