ಬಂಟ್ವಾಳ, ಸೆ 23 (DaijiworldNews/MS): ಮಂಗಳೂರು ಲಾಡ್ಜ್ ಒಂದರಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಂಗಳೂರಿನಲ್ಲಿರುವ ಬಂಟ್ವಾಳ ಮೂಲದ ಗುರುಪ್ರಸಾದ್ ಎಂಬವರ ಮೃತದೇಹ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಬಂಟ್ವಾಳ ತಾಲೂಕಿನ ಬ್ರಹ್ಮರಕೋಟ್ಲು ಕನಪಾಡಿ ನಿವಾಸಿಯಾಗಿರುವ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಅವರು ಸೆ.20 ರಿಂದ ಲಾಡ್ಜ್ ನಲ್ಲಿ ತಂಗಿದ್ದರು.ಅ ಬಳಿಕ ರೂಮ್ ಲಾಕ್ ಆಗಿತ್ತು. ಸೆ.23 ರ ಗುರುವಾರ ಸಂಶಯ ದ ಮೇಲೆ ಪೋಲೀಸರಿಗೆ ದೂರು ನೀಡಿದ್ದು, ಪಾಂಡೇಶ್ಚರ ಎಸ್.ಐ.ಶೀತಲ್ ನೇತೃತ್ವದ ಲ್ಲಿ ಲಾಡ್ಜ್ ನ ಬಾಗಿಲು ಒಡೆದು ಒಳಗೆ ಪ್ರವೇಶ ಮಾಡಿದಾಗ ಗುರುಪ್ರಸಾದ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಗುರು ಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಅಥವಾ ಅಸೌಖ್ಯದಿಂದ ಮೃತಪಟ್ಟಿದ್ದಾರಾ? ಎಂಬುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿದುಬರಬೇಕಾಗಿದೆ.