ಕಾರ್ಕಳ, ಸೆ. 22 (DaijiworldNews/SM): ಅಂಗಡಿ ಬದಿಯಲ್ಲಿ ಮಲಗಿದ್ದ ವೃದ್ಧರೊಬ್ಬರು ನಾಯಿಗಳ ಕಡಿತಕ್ಕೊಳಗಾಗಿ ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಹಿರ್ಗಾನ ಎಂಬಲ್ಲಿ ಸಂಭವಿಸಿದೆ. ಹೆರ್ಮುಂಡೆಯ ಸಾಧು ಪೂಜಾರಿ(80) ಮೃತಪಟ್ಟವರು.
ಕಳೆದ 40 ವರ್ಷಗಳಿಂದ ಮನೆಗೆ ಹೋಗದೇ ಕೂಲಿ ಕೆಲಸ ಮಾಡಿಕೊಂಡು ಹಿರ್ಗಾನ ಮೂಜೂರು ಪರಿಸರದ ಅಂಗಡಿ ಬದಿಯಲ್ಲಿ ರಾತ್ರಿ ಮಲಗುತ್ತಿದ್ದರು. ಸೆಪ್ಟೆಂಬರ್ 21ರ ರಾತ್ರಿ ವಿಪರೀತ ಮದ್ಯಸೇವಿಸಿ ಹಿರ್ಗಾನ ಸ್ವಾಗತ್ ಕಾಂಪ್ಲೆಕ್ಸ್ ಕಟ್ಟಡದ ಎದುರು ಮಲಗಿದ್ದರು. ರಾತ್ರಿ ವೇಳೆಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದವು. ಇದರಿಂದ ವಿಪರೀತ ರಕ್ತಸ್ರಾವವಾಗಿ ಸಾವನೊಪ್ಪಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.